ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರುಚಿಕರವಾದ ʼತೆಂಗಿನಕಾಯಿʼ ರೈಸ್ ಬಾತ್ ಮಾಡುವ ವಿಧಾನ

09:44 AM Mar 13, 2024 IST | Bcsuddi
Advertisement

ದಿನಾ ಅನ್ನ ಸಾರು ತಿಂದು ಬೇಜಾರದವರು ಒಮ್ಮೆ ತೆಂಗಿನಕಾಯಿ ಬಳಸಿ ಈ ರೈಸ್ ಬಾತ್ ಮಾಡಿಕೊಂಡು ಸವಿಯಿರಿ. ತಿನ್ನುವುದಕ್ಕೂ ಸಖತ್ ರುಚಿಯಾಗಿರುತ್ತದೆ.

Advertisement

ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್ ತೆಂಗಿನೆಣ್ಣೆ ಹಾಕಿ. ನಂತರ ಅದಕ್ಕೆ 1 ಟೇಬಲ್ ಸ್ಪೂನ್ ಕಡಲೆಬೇಳೆ, 1 ಟೀ ಸ್ಪೂನ್ ಸಾಸಿವೆ, 1 ಟೇಬಲ್ ಸ್ಪೂನ್ ಉದ್ದಿನಬೇಳೆ, ½ ಟೀ ಸ್ಪೂನ್ ಜೀರಿಗೆ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ 2 ಹಸಿಮೆಣಸು ಕತ್ತರಿಸಿ ಹಾಕಿ. ನಂತರ 2 ಟೇಬಲ್ ಸ್ಪೂನ್ ಕಡಲೆಬೀಜ, 1 ಚಮಚ ಎಳ್ಳು, 1 ಒಣಮೆಣಸು, ಚಿಟಿಕೆ ಇಂಗು 10 ಎಸಳು ಕರಿಬೇವು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ 1ಕಪ್ ತೆಂಗಿನಕಾಯಿ ತುರಿ ಹಾಕಿ ಸ್ವಲ್ಪ ಅರಿಶಿನ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಬೇಯಿಸಿಟ್ಟುಕೊಂಡ ಅನ್ನ 2 ಕಪ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕತ್ತರಿಸಿಟ್ಟುಕೊಂಡ ಕೊತ್ತಂಬರಿಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸವಿಯಿರಿ.

Advertisement
Next Article