For the best experience, open
https://m.bcsuddi.com
on your mobile browser.
Advertisement

ರೀಲ್ಸ್ ಮಾಡುವಾಗ ಆಯತಪ್ಪಿ 6ನೇ ಮಹಡಿಯಿಂದ ಬಿದ್ದ 16ರ ಬಾಲಕಿ

02:14 PM Aug 14, 2024 IST | BC Suddi
ರೀಲ್ಸ್ ಮಾಡುವಾಗ ಆಯತಪ್ಪಿ 6ನೇ ಮಹಡಿಯಿಂದ ಬಿದ್ದ 16ರ ಬಾಲಕಿ
Advertisement

ಉತ್ತರಪ್ರದೇಶ: 16ರ ಬಾಲಕಿಯೊಬ್ಬಳು ರೀಲ್ಸ್ ಮಾಡಲು ಹೋಗಿ 6ನೇ ಮಹಡಿಯಿಂದ ಬಿದ್ದು, ತೀವ್ರವಾಗಿ ಗಾಯಗೊಂಡಿರುವ ಘಟನೆ ಘಾಜಿಯಾಬಾದ್‌ನ ಇಂದಿರಾಪುರಂನಲ್ಲಿ ನಡೆದಿದೆ.

ಬಾಲಕಿಯನ್ನು ಮೋನಿಶಾ (16) ಎಂದು ಗುರುತಿಸಲಾಗಿದೆ. ಈಕೆ ಇಂದಿರಾಪುರಂ ಪ್ರದೇಶದಲ್ಲಿರುವ ಕ್ಲೌಡ್-9 ಸೊಸೈಟಿಯ ತನ್ನ ಮನೆಯಲ್ಲಿ ರೀಲ್ಸ್ ಮಾಡುತ್ತಿದ್ದ ವೇಳೆ ಆಯತಪ್ಪಿ 6ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ತೀವ್ರ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ವಿಡೀಯೋವು ಸಾಮಾಜಿಕ ಜಾಲತಾಲದಲ್ಲಿ ಶೇರ್ ಆಗಿದ್ದು, ಈ ವಿಡಿಯೋದಲ್ಲಿ 6ನೇ ಮಹಡಿಯಿಂದ ಬಿದ್ದ ರಭಸಕ್ಕೆ ಬಾಲಕಿ ತೀವ್ರ ಗಾಯಗೊಂಡಿದ್ದು, ನೋವು ತಡೆಯಲಾಗದೇ ಕಿರುಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.

Advertisement

Author Image

Advertisement