For the best experience, open
https://m.bcsuddi.com
on your mobile browser.
Advertisement

'ರಾಹುಲ್ ಗಾಂಧಿ ಉತ್ತರಪ್ರದೇಶಕ್ಕೆ ಅಪಮಾನ ಮಾಡುತ್ತಿದ್ದಾರೆ'- ಯೋಗಿ

02:11 PM Jul 02, 2024 IST | Bcsuddi
 ರಾಹುಲ್ ಗಾಂಧಿ ಉತ್ತರಪ್ರದೇಶಕ್ಕೆ ಅಪಮಾನ ಮಾಡುತ್ತಿದ್ದಾರೆ   ಯೋಗಿ
Advertisement

ದೆಹಲಿ: ರಾಹುಲ್‌ ಗಾಂಧಿ ಸುಳ್ಳು ಮತ್ತು ತಪ್ಪಾದ ಮಾಹಿತಿ ಹರಡುವ ಮೂಲಕ ಉತ್ತರಪ್ರದೇಶಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯಾನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಜನರಿಂದ ಭೂಮಿ ಕಸಿದಿದ್ದು, ಅದಕ್ಕೆ ಪರಿಹಾರ ನೀಡಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಕಿಡಿದ ಅವರು, ಸದನದಲ್ಲಿ ರಾಹುಲ್ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡು. ಅಯೋಧ್ಯೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ನಿರಾಶ್ರಿತರಾದ ಜನರಿಗೆ ಪರಿಹಾರವಾಗಿ 1,733 ಕೋಟಿ ರೂಪಾಯಿ ನೀಡಲಾಗಿದೆ. ರಾಹುಲ್ ಗಾಂಧಿ ತಮ್ಮ ಖಂಡನೀಯ ಹೇಳಿಕೆಗೆ ಜಗತ್ತಿನಾದ್ಯಂತ ಹರಡಿರುವ ಕೋಟ್ಯಂತರ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ತಿಳಿಸಿದರು.

ರಾಹುಲ್ ಗಾಂಧಿ ಮತ್ತು ಅವರ ಸಹಚರರು ಅಯೋಧ್ಯೆ ಜನರನ್ನು ಗಡಿಪಾರು ಮಾಡಿದ್ದು ಮಾತ್ರವಲ್ಲದೆ ಸರಯೂ ನದಿಯನ್ನು ರಕ್ತದಲ್ಲಿ ಮುಳುಗಿಸಿದ್ದರು. ಇಂದು, ಅಯೋಧ್ಯೆ ತನ್ನ ವೈಭವವನ್ನು ಮರುಸ್ಥಾಪಿಸುತ್ತಿರುವಾಗ ಮತ್ತು ಇಡೀ ಜಗತ್ತನ್ನು ಆಕರ್ಷಿಸುತ್ತಿರುವಾಗ, ಕಾಂಗ್ರೆಸ್ ಅದನ್ನು ಹೇಗೆ ಒಳ್ಳೆಯದು ಎಂದು ಪರಿಗಣಿಸುತ್ತದೆ? ಕಾಂಗ್ರೆಸ್ ಸುಳ್ಳಿನ ಕಂತೆ. ನಿಜ ಹೇಳಬೇಕೆಂದರೆ 1733 ಕೋಟಿ ರೂ. ಅಯೋಧ್ಯೆಯ ಜನರಿಗೆ ಪರಿಹಾರವಾಗಿ ನೀಡಲಾಗಿದೆ ಎಂದು ಹೇಳಿದರು.

Advertisement

ರಾಮಪಥ, ಭಕ್ತಿಪಥ, ಜನ್ಮಭೂಮಿ ಪಥ ಅಥವಾ ವಿಮಾನ ನಿಲ್ದಾಣವೇ ಆಗಿರಲಿ, ಯಾರ ಜಮೀನು, ಅಂಗಡಿಗಳು ಮತ್ತು ಮನೆಗಳು ಭಾಗಿಯಾಗಿವೆಯೋ ಅವರಿಗೆ ಪರಿಹಾರ ನೀಡಲಾಗಿದೆ. ಹಿಂಬದಿಯಲ್ಲಿ ಅಂಗಡಿ ಕಟ್ಟಲು ಜಾಗ ಇದ್ದವರಿಗೆ ಅಂಗಡಿಗಳನ್ನು ನಿರ್ಮಿಸಿಕೊಟ್ಟಿದೇವೆ. ನಿವೇಶನ ಇಲ್ಲದವರಿಗೆ ಮಳಿಗೆ ನೀಡುವ ಕೆಲಸವನ್ನು ಬಹುಹಂತದ ಕಾಂಪ್ಲೆಕ್ಸ್ ನಿರ್ಮಿಸಿ ಕೊಡಲಾಗುತ್ತದೆ ಎಂದರು.

Author Image

Advertisement