ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ರಾಮ ಮಂದಿರಕ್ಕೆ ಹೋಗಿ ‌ನಿಮ್ಮ ಪಾಪ ಕಳೆದು ಬನ್ನಿ' - ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು

02:10 PM Jan 14, 2024 IST | Bcsuddi
Advertisement

ಶಿವಮೊಗ್ಗ: ನಿಮ್ಮ ಹೆಸರಿನಲ್ಲಿ ಸಿದ್ದ ಮತ್ತು ರಾಮ ಎರಡೂ ಇದೆ. ರಾಮ ಮಂದಿರಕ್ಕೆ ಹೋಗಿ ನಿಮ್ಮ ‌ಪಾಪ ಕಳೆದುಕೊಂಡು ಬನ್ನಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

Advertisement

ಈ ಕುರಿತು ಮಾತನಾಡಿದ ಅವರು, ನೀವು ಏಕೆ ಬಿಜೆಪಿ ರಾಮ ಮಂದಿರ ಎಂದು ಭಾವಿಸುತ್ತೀರಿ. ನಾವು ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ. ಶ್ರೀರಾಮ ಇರುವುದು ಇಡೀ ಪ್ರಪಂಚದ ಹಿಂದೂಗಳನ್ನು ಒಂದು ಮಾಡಲು. ಯಾವ ರೀತಿ ರಾಜಕಾರಣ ಮಾಡುತ್ತಿದ್ದೇವೆಂದು ನೀವು ಹೇಳಿದರೆ ನಾವು ತಿದ್ದಿಕೊಳ್ಳುತ್ತೇವೆ ಎಂದರು.

ಇನ್ನು ಹಿಂದೂಗಳ ದೇವಾಲಯ ಒಡೆದು ಮಸೀದಿ ಕಟ್ಟಿದ್ದಾರೆಂಬ ಅನಂತ್ ಕುಮಾರ್ ಹೆಗಡೆ ಹೇಳಿಕೆ ತಪ್ಪಲ್ಲ. ಈ ಹೇಳಿಕೆಯನ್ನು ಹಿಂದೂ ಸ್ವಾಗತ ಮಾಡಬೇಕು. ನಮ್ಮ ಸಂಸ್ಕೃತಿ ಉಳಿಯಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಹೋರಾಟ ನಡೆದಿವೆ. ಎಲ್ಲಾ ಹೇಳಿಕೆಯನ್ನ ಸ್ವಾಗತ ಮಾಡಬೇಕು ಎಂದು ಈಶ್ವರಪ್ಪ ಅವರು ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Advertisement
Next Article