ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರಾಮ್ ರಾಜ್ ಕಾಟನ್ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಿಡರ್ ಆದ ರಿಷಬ್ ಶೆಟ್ಟಿ

12:39 PM Jan 27, 2024 IST | Bcsuddi
Advertisement

ಬೆಂಗಳೂರು: ಕಾಂತಾರ ಸಿನೆಮಾ ಮೂಲಕ ಇಡೀ ದೇಶಕ್ಕೆ ಪರಿಚಯವಾದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ರಾಮ್‌ರಾಜ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ.

Advertisement

ಕಳೆದ ಎರಡು ವರ್ಷಗಳಿಂದ ನಟ ರಾಕಿಂಗ್ ಯಶ್ ಯಶ್ ಈ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಈ ವರ್ಷ ಆ ಅವಕಾಶ ರಿಷಬ್ ಪಾಲಾಗಿದೆ. ಇದನ್ನು ನೋಡಿ ಕೆಲವರಿಗೆ ಅಚ್ಚರಿಯಾಗಿದೆ. ‘ಕಾಂತಾರ’ ಸಿನಿಮಾ ಸಮಯದಿಂದಲೂ ರಿಷಬ್ ಹೆಚ್ಚು ಪಂಚೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಡಿವೈನ್ ಸ್ಟಾರ್ ದೇಶಿ ಲುಕ್ ಗಮನ ಸೆಳೆಯುತ್ತಿತ್ತು.

“ವಿವಿಧತೆಯಲ್ಲಿ ಏಕತೆ ನಮ್ಮ ಹೆಮ್ಮೆ. ಪ್ರತಿ ನೂರು ಕಿಲೋಮೀಟರ್‌ಗೆ ಒಂದು ಸಂಸ್ಕೃತಿ ಆದರೆ ನೆಲೆ ಒಂದೇ. ಹೊಸ ಮನೆಯ ಗೃಹ ಪ್ರವೇಶದ ಹಾಗೆ. ಹಾಲು ಉಕ್ಕಿದರೂ ಹುಗ್ಗಿ ಉಕ್ಕಿದರೂ ಹರುಷದ ಘೋಷ ಒಂದೇ ಆಹಾ ಸಕ್ಕರ್ ಪಂಗಲ್, 200 ಕಿಲೋ ಮೀಟರ್ ದಾಟಿದರೆ ಉಟೋಪಚಾರ ಬದಲಾಗುತ್ತದೆ. ಆದರೆ ಸಂಕ್ರಾಂತಿ ಸಿಹಿ ಇರಲಿ, ಓಣಂನ ಸವಿ ಇರಲಿ ರುಚಿ ಒಂದೇ. 400 ಕಿಲೋ ಮೀಟರ್ ದಾಟಿದರೆ ಭಾಷೆ ಬದಲಾಗುತ್ತದೆ. ಆದರೆ ಮನ ತುಂಬಿ ಹಾರೈಸುವುದು ಒಂದೇ ಸದಾ ಸುಖವಾಗಿರಿ. 600 ಕಿಲೋಮೀಟರ್ ದಾಟಿದರೆ ಆಚಾರ ವಿಚಾರ ಬದಲಾಗುತ್ತದೆ ಆದರೆ ಮನಸ್ಸುಗಳು ಒಂದಾಗಿಸುವ ಬಾಂಧವ್ಯ ಒಂದೇ” ಎಂದು ರಿಷಬ್ ವಾಯ್ಸ್ ಓವರ್ ಹಿನ್ನೆಲೆಯಲ್ಲಿ ಜಾಹೀರಾತು ಮೂಡಿ ಬಂದಿದೆ.

 

Advertisement
Next Article