ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರಾಮಮಂದಿರ ನಿರ್ಮಾಣ ಟ್ರಸ್ಟ್ ನ್ನು ಮೋದಿ ಟೀಮ್ ಹೈಜಾಕ್ ಮಾಡಿದೆ: ವಿ.ಎಸ್.ಉಗ್ರಪ್ಪ

05:50 PM Jan 05, 2024 IST | Bcsuddi
Advertisement

ಬೆಂಗಳೂರು: ರಾಮ ಲಲ್ಲಾನ ಪೂಜೆಗೆ ಅಯೋಧ್ಯೆಯಲ್ಲಿ ಮೊದಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ರಾಜೀವ್ ಗಾಂಧಿಯವರು . ಆದರೆ ರಾಮಮಂದಿರ ನಿರ್ಮಾಣಕ್ಕೆ ಮೀಸಲಾಗಿರುವ ಟ್ರಸ್ಟನ್ನು ಮೋದಿ ಟೀಮ್ ಸಂಪೂರ್ಣ ರಾಜಕೀಯ ಕಾರಣಗಳಿಗಾಗಿ ಹೈಜಾಕ್ ಮಾಡಿದೆ ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

Advertisement

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ಅವರು ಪ್ರಧಾನಿಗಳಾಗಿದ್ದ ಸಮಯದಲ್ಲಿ ಮೊಟ್ಟಮೊದಲ ಬಾರಿಗೆ ರಾಮ ಲಲ್ಲಾನ ಪೂಜೆಗೆ ಅವಕಾಶ ನೀಡಿದರು. ರಾಮಾಯಣದಲ್ಲಿ ಯಾವುದೇ ದೇವತೆಗಳು ಕಿನ್ನರ ಕಿಂಪುರುಷರಿಂದ ರಾವಣನಿಗೆ ಸಾವಿಲ್ಲ ಸಾಮಾನ್ಯ ಮನುಷ್ಯನಿಂದ ಮಾತ್ರ ಸಾವು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ರಾಮ, ಲಕ್ಷ್ಮಣ ಮತ್ತು ಸೀತೆ ಎಲ್ಲಿಯೂ ಸಹ ತಮ್ಮನ್ನ ತಾವು ದೇವರುಗಳು ಎಂದು ಬಿಂಬಿಸಿಕೊಂಡಿಲ್ಲ.ರಾಮ ಎಲ್ಲಿಯೂ ದೇವಸ್ಥಾನವನ್ನು ಬಯಸಿದವನಲ್ಲ ರಾಮನ ಆದರ್ಶಗಳನ್ನು ನಾವು ಗೌರವಿಸುತ್ತೇವೆ. ಆದರೆರಾಮಮಂದಿರ ನಿರ್ಮಾಣಕ್ಕೆ ಮೀಸಲಾಗಿರುವ ಟ್ರಸ್ಟನ್ನು ಮೋದಿ ಟೀಮ್ ಸಂಪೂರ್ಣ ರಾಜಕೀಯ ಕಾರಣಗಳಿಗಾಗಿ ಹೈಜಾಕ್ ಮಾಡಿದೆ ಎಂದು ಹೇಳಿದ್ದಾರೆ.

ರಾಜಕೀಯ ಕಾರಣಗಳಿಗೋಸ್ಕರ ಧರ್ಮ ಮತ್ತು ದೇವರನ್ನ ಕೊಳ್ಳುವುದು ಅಪರಾಧ. ಧರ್ಮ ಮತ್ತು ದೇವರನ್ನ ಬಳಸಿಕೊಂಡವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದರೆ ಅವರನ್ನು ಅನರ್ಹಗೊಳಿಸುವ ಅಧಿಕಾರ ಚುನಾವಣಾ ಆಯೋಗಕ್ಕಿದೆ. ರಾಮಾಯಣ,ರಾಮ ಮತ್ತು ಮಹರ್ಷಿ ವಾಲ್ಮೀಕಿ ಅವರಿಗೆ ಬಿಜೆಪಿ ಅಪಚಾರ. ಅಯೋಧ್ಯ ರಾಮ ಮಂದಿರ ಜನರ ದೇವಸ್ಥಾನವಾಗಿ ಇರಬೇಕೆ ಹೊರತು. ಬಿಜೆಪಿಯವರ ದೇವಸ್ಥಾನ ಕೊಡದು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇಲೆ ಇವರು ದೇವಸ್ಥಾನ ನಿರ್ಮಾಣ ಮಾಡುತ್ತಿದ್ದಾರೆಯೇ ಹೊರತು ಸ್ವಂತ ಆಸಕ್ತಿಯಿಂದ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

Advertisement
Next Article