ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರಾಮನಗರ : ಎಚ್‌ಡಿಕೆಗೆ ಟಕ್ಕರ್ ಕೊಡಲು ಚನ್ನಪಟ್ಟಣದಲ್ಲಿ ಡಿಕೆಶಿ ಧ್ವಜಾರೋಹಣ..?

11:46 AM Aug 14, 2024 IST | BC Suddi
Advertisement

ಚನ್ನಪಟ್ಟಣ : ಚನ್ನಪಟ್ಟಣ ಉಪಚುನಾವಣೆಯ ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಚುನಾವಣೆಯ ಕದನ ರಂಗು ಪಡೆದುಕೊಳ್ಳುತ್ತಿದೆ.. ಮೈತ್ರಿ ಪಕ್ಷದಲ್ಲಿ ಅಭ್ಯರ್ಥಿ ಯಾರ್ ಆಗಬೇಕು ಎಂಬ ಚರ್ಚೆ ನಡೆಯುತ್ತಿದ್ದರೆ..ಇತ್ತ ಆಡಳಿತಾರೂಢ ಕಾಂಗ್ರೆಸ್ ನಿಂದ ಡಿಕೆಶಿ ಹೊಸ ಹೊಸ ತಂತ್ರಕ್ಕೆ ಮುಂದಾಗುತ್ತಿದ್ದಾರೆ... ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಚನ್ನಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಲು ಡಿಸಿಎಂ ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ..ಈ ಮೂಲಕ ಚನ್ನಪಟ್ಟಣ ಉಪಚುನಾವಣೆಯ ಮೇಲೆ ಕಣ್ಣಿಟ್ಟು ಹೆಚ್ ಡಿಕೆಗೆ ಟಕ್ಕರ್ ಕೊಡಲು ಡಿಸಿಎಂ ತಂತ್ರಗಾರಿಕೆ ಮಾಡಿದ್ದಾರೆ ಎನ್ನಲಾಗಿದೆ... ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆ ಯಿಂದ ಕುಮಾರಸ್ವಾಮಿ ಈಗ ರಾಜೀನಾಮೆ ನೀಡಿದ್ದಾರೆ, ಕೆಲವೇ ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ..ಈಗಾಗಲೇ ವಾರದಲ್ಲಿ ಒಂದು ಬಾರಿ ಚನ್ನಪಟ್ಟಣಕ್ಕೆ ತೆರಳಿ ಮೊಕ್ಕಾಂ ಹೊಡುತ್ತಿರುವ ಡಿಕೆಶಿ...ಹೇಗಾದರೂ ಮಾಡಿ ಚನ್ನಪಟ್ಟಣವನ್ನ ತಮ್ಮ‌ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ತವಕದಲ್ಲಿದ್ದಾರೆ... ಅದ್ರಲ್ಲೂ ಹೆಚ್ ಡಿಕೆಗೆ ಟಕ್ಕರ್ ಕೊಡಲು ಈ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.. ಅದು ಅಲ್ದೇ ತಾಲ್ಲೂಕು ಮಟ್ಟದಲ್ಲಿ ಡಿಸಿಎಂ ಧ್ವಜಾರೋಹಣ ಮಾಡಿದ್ರೆ ಇದೇ ಮೊದಲು ಎನ್ನಲಾಗ್ತಿದೆ..ಸ್ವಾತಂತ್ರ್ಯ ದಿನಾಚರಣೆಯಂದು ಸಿಎಂ ರಾಜಧಾನಿ ಬೆಂಗಳೂರಲ್ಲಿ ಧ್ವಜಾರೋಹಣ ಮಾಡಿದ್ರೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ ಧ್ವಜಾರೋಹಣ ಮಾಡ್ತಾರೆ, ಆದ್ರೆ ತಾಲ್ಲೂಕು ಮಟ್ಟದಲ್ಲಿ ಶಾಸಕರುಗಳು ಮಾಡುತ್ತಿದ್ದಾರೆ.. ನಿಜಕ್ಕೂ ಡಿಸಿಎಂ‌ ಡಿಕೆಶಿ ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ್ರೆ ಇದೆ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಡಿಸಿಎಂ ಧ್ವಜಾರೋಹಣ ಮಾಡಿದ ಹೊಸ ಸಂಪ್ರದಾಯಕ್ಕೆ ಸಾಕ್ಷಿಯಾಗಲಿದೆ.. ಒಟ್ಟಾರೆ ಉಪಚುನಾವಣೆಯ ದೃಷ್ಟಿಕೋನದಿಂದ ಮತ್ತು ಹೆಚ್ ಡಿಕೆಗೆ ಟಕ್ಕರ್ ಕೊಡಲು ಡಿಕೆಶಿ ಈ ತಂತ್ರರೂಪಿಸಿದ್ದಾರೆ ಎನ್ನಲಾಗಿದೆ.. ಚುನಾವಣಾ ಘೋಷಣೆಗೂ ಮುನ್ನ ಚನ್ನಪಟ್ಟಣದಲ್ಲಿ ಚುನಾವಣೆಯ ಬಿಸಿ ಅಂತೂ ಶುರುವಾಗಿದೆ.

Advertisement

Advertisement
Next Article