ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರಾತ್ರಿ ಕಣ್ತುಂಬಾ ನಿದ್ದೆ ಮಾಡೋದ್ರಿಂದ ಎಷ್ಟೆಲ್ಲಾ ʼಲಾಭʼವಿದೆ ಗೊತ್ತಾ….?

09:55 AM Feb 14, 2024 IST | Bcsuddi
Advertisement

ಬ್ಯೂಟಿ ಸ್ಲೀಪ್ ಬಗ್ಗೆ ನೀವೂ ಕೇಳಿರಬಹುದು. ನಿದ್ದೆಯಲ್ಲಿ ನಿಮ್ಮ ಸೌಂದರ್ಯ ಅಡಗಿದೆ ಅನ್ನೋದು ಸುಳ್ಳಲ್ಲ, ಸತ್ಯ. ಯಾರು ರಾತ್ರಿ ಸರಿಯಾಗಿ ನಿದ್ದೆ ಮಾಡುವುದಿಲ್ವೋ ಅವರು ಹೆಚ್ಚು ಚಟುವಟಿಕೆಯಿಂದಿರುವುದಿಲ್ಲ. ಸಂಶೋಧಕರ ಪ್ರಕಾರ ಎರಡು ರಾತ್ರಿ ನಿಮಗೆ ಸರಿಯಾಗಿ ನಿದ್ದೆ ಬಂದಿಲ್ಲ ಅಂದ್ರೆ ನಿಮ್ಮ ಪರ್ಸನಾಲಿಟಿಯೇ ಬದಲಾಗುತ್ತದೆ. 25 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿದೆ.

Advertisement

ಒಂದು ಗ್ರೂಪ್ ನವರಿಗೆ ರಾತ್ರಿ ಚೆನ್ನಾಗಿ ನಿದ್ದೆ ಮಾಡುವಂತೆ ಸೂಚಿಸಲಾಯ್ತು, ಇನ್ನೊಂದು ಗುಂಪಿನವರಿಗೆ ಕೇವಲ 4 ಗಂಟೆ ಮಾತ್ರ ನಿದ್ದೆ ಮಾಡಲು ಅವಕಾಶ ನೀಡಲಾಯ್ತು. ಎರಡೂ ಗ್ರೂಪ್ ನ ಸದಸ್ಯರಿಗೆ ಮೇಕಪ್ ಮಾಡದೆ ಫೋಟೋ ತೆಗೆಯಲಾಯ್ತು. ಎರಡೂ ಫೋಟೋಗಳಲ್ಲಿ ಯಾರು ಹೆಚ್ಚು ಆ್ಯಕ್ಟಿವ್, ಹೆಲ್ದಿ, ಎನರ್ಜೆಟಿಕ್ ಹಾಗೂ ಆತ್ಮವಿಶ್ವಾಸಿಗಳಾಗಿ ಕಾಣಿಸ್ತಾರೆ ಅಂತಾ 122 ಜನರ ಬಳಿ ಕೇಳಲಾಯ್ತು.

ಕೇವಲ ನಾಲ್ಕು ಗಂಟೆ ನಿದ್ದೆ ಮಾಡಿದವರ ಬಗ್ಗೆ ಎಲ್ಲರೂ ನೆಗೆಟಿವ್ ಕಮೆಂಟ್ಸ್ ನೀಡಿದ್ದರು. ಯಾರು ಕಣ್ತುಂಬಾ ನಿದ್ರೆ ಮಾಡಿದ್ದಾರೋ ಅವರು ಹೆಚ್ಚು ಚಟುವಟಿಕೆಯಿಂದ, ಆರೋಗ್ಯಕರವಾಗಿ, ಆತ್ಮವಿಶ್ವಾಸದಿಂದ ಇದ್ದಾರೆ ಅಂತಾ ಎಲ್ಲರೂ ಅಭಿಪ್ರಾಯಪಟ್ರು. ಚೆನ್ನಾಗಿ ನಿದ್ರೆ ಮಾಡಿದ್ರೆ ನೀವು ಹೆಲ್ದಿ ಮಾತ್ರವಲ್ಲ ಆಕರ್ಷಕವಾಗಿಯೂ ಕಾಣಿಸುತ್ತೀರಾ. ಜನರು ನಿಮ್ಮನ್ನು ಇಷ್ಟಪಡ್ತಾರೆ. ನಿಮ್ಮ ಇಡೀ ವ್ಯಕ್ತಿತ್ವ ಅದ್ಭುತವಾಗಿ ಕಾಣಿಸಬೇಕೆಂದ್ರೆ ಕಡಿಮೆ ಅಂದ್ರೂ ದಿನಕ್ಕೆ 8 ಗಂಟೆ ನಿದ್ದೆ ಮಾಡಿ.

Advertisement
Next Article