ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ರಾಜ್ಯ ಸರ್ಕಾರ ಪೊಲೀಸರನ್ನೇ ಭಕ್ಷಕರನ್ನಾಗಿ ಮಾಡಿದೆ'- ಭಾಸ್ಕರ್ ರಾವ್ ಆರೋಪ

01:08 PM Aug 06, 2024 IST | BC Suddi
Advertisement

ಚಿತ್ರದುರ್ಗ: ರಾಜ್ಯ ಸರ್ಕಾರ ಪೊಲೀಸರನ್ನೇ ಭಕ್ಷಕರನ್ನಾಗಿ ಮಾಡಿದೆ. ಲಕ್ಷಾಂತರ ರೂ. ಹಣ ನೀಡುವ ತನಕ ಪೋಸ್ಟಿಂಗ್ ಕೊಡುವುದಿಲ್ಲ. ಸಮವಸ್ತ್ರಧಾರಿಗಳು ಭಕ್ಷಕರು ಮಾತ್ರವಲ್ಲ ಭಿಕಾರಿಗಳಾಗಿದ್ದಾರೆ. ಇದು ನೇರವಾಗಿ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಆರೋಪಿಸಿದ್ದಾರೆ.

Advertisement

ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಬೇರೆ ಇಲಾಖೆಗಳಲ್ಲಿ ಗುತ್ತಿಗೆ, ಟೆಂಡರ್, ಪರ್ಸೆಂಟೇಜ್ ನಡೆಯುತ್ತದೆ. ಆದರೆ, ಪೊಲೀಸರು ಜನಸಾಮಾನ್ಯರಿಂದ ವಸೂಲಿ ಮಾಡಬೇಕಾಗುತ್ತದೆ. ಲೂಟಿ ಹೊಡೆಯಿರಿ ಎಂದು ಸರ್ಕಾರವೇ ಒತ್ತಡ ಹೇರುತ್ತಿದೆ. ಇದರಿಂದಾಗಿ ಪೊಲೀಸ್ ಇಲಾಖೆ ಸಂಪೂರ್ಣ ದುರ್ಬಲವಾಗುತ್ತಿದೆ. ಪೊಲೀಸರಿಗೇ ರಕ್ಷಣೆ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಬೇರೆ ಇಲಾಖೆಗಳಲ್ಲಿ ಗುತ್ತಿಗೆ, ಟೆಂಡರ್, ಪರ್ಸೆಂಟೇಜ್ ನಡೆಯುತ್ತದೆ. ಆದರೆ, ಪೊಲೀಸರು ಜನಸಾಮಾನ್ಯರಿಂದ ವಸೂಲಿ ಮಾಡಬೇಕಾಗುತ್ತದೆ. ಲೂಟಿ ಹೊಡೆಯಿರಿ ಎಂದು ಸರ್ಕಾರವೇ ಒತ್ತಡ ಹೇರುತ್ತಿದೆ. ಇದರಿಂದಾಗಿ ಪೊಲೀಸ್ ಇಲಾಖೆ ಸಂಪೂರ್ಣ ದುರ್ಬಲವಾಗುತ್ತಿದೆ. ಪೊಲೀಸರಿಗೇ ರಕ್ಷಣೆ ಕೊಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ ಎಂದು ತಿಳಿಸಿದರು.

ಬೆಂಗಳೂರಲ್ಲಿ ಪೊಲೀಸ್ ಠಾಣೆಗೆ ಪೋಸ್ಟಿಂಗ್ ಪಡೆಯಲು ಕೋಟಿಗಟ್ಟಲೆ ಹಣ ನೀಡಬೇಕು. ಜಿಲ್ಲೆಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಕೊಡಬೇಕಿದೆ. ಜನಪ್ರತಿನಿಧಿಗಳು, ಗೃಹ ಸಚಿವರು, ಮುಖ್ಯಮಂತ್ರಿಗೆ ಹಣ ನೀಡಬೇಕು. ಪ್ರಬಲವಾದ ಸಿಎಂ ಇದ್ದರೆ ಈ ರೀತಿ ಆಗುವುದಿಲ್ಲ. ದುರ್ಬಲ ಸಿಎಂ ಇದ್ದಾಗ ಮಾತ್ರ ಈ ರೀತಿಯೆಲ್ಲಾ ಆಗುತ್ತದೆ. ಶಾಸಕರಿಗೆಲ್ಲ ತೋಳಗಳಂತೆ ಹಣ ಕೀಳಲು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Advertisement
Next Article