ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.!
07:50 AM Jul 07, 2024 IST | Bcsuddi
Advertisement
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸುಗಳ ಆಗಸ್ಟ್‌ನಲ್ಲಿ ಜಾರಿಗೆ ಬರುವುದು ಖಚಿತವಾಗಿದೆಯಂತೆ.!
ಏಳನೇ ವೇತನ ಆಯೋಗದ ಶಿಫಾರಸುಗಳ ಹಣಕಾಸು ಹೊಂದಾಣಿಕೆ ಕುರಿತಂತೆ ಪರಿಶೀಲನೆ ನಡೆಸಿ ಮಾಹಿತಿ ಕೊಡುವಂತೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಸೂಚನೆಗೆ ಆರ್ಥಿಕ ಇಲಾಖೆಗೆ ಒಪ್ಪಿಗೆ ನೀಡಿದ್ದು, ಆಗಸ್ಟ್ ನಲ್ಲಿ ಏಳನೇ ವೇತನ ಆಯೋಗ ಜಾರಿಯಾಗುವ ಸಾಧ್ಯತೆ ಇದೆ ಎಂಬುದು ಸುದ್ದಿ.
ಏಳನೇ ವೇತನ ಆಯೋಗ ಶೇ.27.5 ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು. ಹಿಂದಿನ ಸರ್ಕಾರ ಶೇ.17 ಮಧ್ಯಂತರ ಪರಿಹಾರ ನೀಡಿತ್ತು. ಇದೀಗ ಉಳಿದ ಶೇ.10.5 ಹೆಚ್ಚಳ ನೀಡಲು ನಿರ್ಧರಿಸಲಾಗಿದೆ. ವೇತನ ಹೆಚ್ಚಳಕ್ಕಾಗಿಯೇ ಬಜೆಟ್‌ನಲ್ಲಿ 14 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದ್ದು, ಜು. 15 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಬಳಿಕ ಆದೇಶ ಪ್ರಕಟವಾಗಿ ಜಾರಿಗೆ ಬರಲಿದೆಯಂತೆ.!
Advertisement