For the best experience, open
https://m.bcsuddi.com
on your mobile browser.
Advertisement

ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

09:08 AM Dec 24, 2023 IST | Bcsuddi
ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ
Advertisement

ಬೆಂಗಳೂರು:ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ರಾಜ್ಯ ಉಪಾಧ್ಯಕ್ಷರು, ರಾಜ್ಯ ಪ್ರಧಾ‌ನ ಕಾರ್ಯದರ್ಶಿಗಳು, ರಾಜ್ಯ ಕಾರ್ಯದರ್ಶಿಗಳು, ಖಜಾಂಚಿ ಮತ್ತು 7 ಮೋರ್ಛಾಗಳ ಅಧ್ಯಕ್ಷರ ನೇಮಕ ಮಾಡಲಾಗಿದೆ. ಪದಾಧಿಕಾರಿಗಳ ಪಟ್ಟಿಯಲ್ಲಿ 6 ಶಾಸಕರು, ವಿಧಾನಪರಿಷತ್​ನ ಓರ್ವ ಸದಸ್ಯ, 10 ಮಾಜಿ ಶಾಸಕರಿಗೆ ಅವಕಾಶ ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರ 6 ಆಪ್ತರು, ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ವಿಜಯೇಂದ್ರರ ಇಬ್ಬರು ಆಪ್ತರಿಗೆ ಸ್ಥಾನ ನೀಡಲಾಗಿದೆ. ಬಿಜೆಪಿಗೆ ಬಂದಿದ್ದ 17 ವಲಸಿಗರ ಪೈಕಿ ಭೈರತಿ ಬಸವರಾಜ್​ಗೆ ಮತ್ತು 6 ಮಹಿಳೆಯರಿಗೆ ಸ್ಥಾನ ನೀಡಲಾಗಿದೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ: ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಬೈರತಿ ಬಸವರಾಜ, ರಾಜೂ ಗೌಡ ನಾಯಕ್, ಎನ್. ಮಹೇಶ್, ಅನಿಲ್ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ನಾಯಕ್, ಡಾ. ಬಸವರಾಜ ಕೇಲಗಾರ, ಮಾಳವಿಕಾ ಅವಿನಾಶ್ ಮತ್ತು ಎಂ. ರಾಜೇಂದ್ರ ನೇಮಕ.

Advertisement

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ: ವಿ. ಸುನೀಲ್ ಕುಮಾರ್, ಪಿ. ರಾಜೀವ್, ಎನ್.ಎಸ್. ನಂದೀಶ್ ರೆಡ್ಡಿ ಮತ್ತು ಜೆ. ಪ್ರೀತಮ್ ಗೌಡ ನೇಮಕ.

ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾಗಿ: ಶೈಲೇಂದ್ರ ಬೆಲ್ದಾಳೆ, ಡಿ.ಎಸ್. ಅರುಣ್, ಬಸವರಾಜ ‌ಮತ್ತಿಮೂಡ, ಸಿ. ಮುನಿರಾಜು, ವಿನಯ್ ಬಿದರೆ, ಕ್ಯಾ. ಬ್ರಿಜೇಶ್ ಚೌಟ, ಶರಣು ತಳ್ಳಿಕೇರಿ, ಲಲಿತಾ ಅನಾಪುರ, ಡಾ. ಲಕ್ಷ್ಮೀ ಅಶ್ವಿನ್ ಗೌಡ, ಅಂಬಿಕಾ ಹುಲಿನಾಯ್ಕರ್ ನೇಮಕ.

ರಾಜ್ಯ ಖಜಾಂಚಿಯಾಗಿ: ಸುಬ್ಬನರಸಿಂಹ ನೇಮಕ.

ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆಯಾಗಿ: ಸಿ. ಮಂಜುಳಾ

ಯುವ ಮೋರ್ಛಾ ರಾಜ್ಯಾಧ್ಯಕ್ಷರಾಗಿ: ಧೀರಜ್ ಮುನಿರಾಜು ನೇಮಕ

ಎಸ್​ಟಿ ಮೋರ್ಛಾ ರಾಜ್ಯಾಧ್ಯಕ್ಷರಾಗಿ: ಬಂಗಾರು ಹನುಮಂತು

ಎಸ್​ಸಿ ಮೋರ್ಛಾ ರಾಜ್ಯಾದ್ಯಕ್ಷರಾಗಿ: ಎಸ್. ಮಂಜುನಾಥ್

ಒಬಿಸಿ ಮೋರ್ಛಾ ರಾಜ್ಯಾಧ್ಯಕ್ಷರಾಗಿ: ರಘು ಕೌಟಿಲ್ಯ

ರೈತ ಮೋರ್ಛಾ ರಾಜ್ಯಾದ್ಯಕ್ಷರಾಗಿ: ಎ.ಎಸ್. ಪಾಟೀಲ್ ನಡಹಳ್ಳಿ

ಅಲ್ಪಸಂಖ್ಯಾತ ಮೋರ್ಛಾದ ರಾಜ್ಯಾಧ್ಯಕ್ಷರಾಗಿ: ಅನಿಲ್ ಥಾಮಸ್

Author Image

Advertisement