ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರಾಜಕೀಯಕ್ಕೆ ಮರಳುವುದಾಗಿ ಘೋಷಿಸಿದ ಮಾಜಿ ಸಿಎಂ ಜಯಲಲಿತಾ ನಿಕಟವರ್ತಿ ಶಶಿಕಲಾ

11:41 AM Jun 17, 2024 IST | Bcsuddi
Advertisement

ಚೆನ್ನೈ: ದಿವಂಗತ ಮಾಜಿ ಸಿಎಂ ಜೆ. ಜಯಲಲಿತಾ ಅವರ ನಿಕಟವರ್ತಿ ವಿ.ಕೆ. ಶಶಿಕಲಾ ಅವರು ರಾಜಕೀಯಕ್ಕೆ ಮರಳುವುದಾಗಿ ಘೋಷಿಸಿದ್ದಾರೆ.

Advertisement

ಈ ಹಿಂದೆ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾವಿ ಸ್ಥಾನ ಹೊಂದಿದ್ದ ಶಶಿಕಲಾ ಅವರು ದೀರ್ಘಾವಧಿಯವರೆಗೆ ರಾಜಕೀಯಕ್ಕೆ ಗೈರಾಗಿದ್ದರು. ಇದೀಗ ಮತ್ತೆ ರಾಜಕೀಯಕ್ಕೆ ಮರಳುವುದಾಗಿ ತಿಳಿಸಿದ್ದಾರೆ. ಜೊತೆಗೆ ಅವರು 2026 ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಯನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರತಿಜ್ಞೆ ಮಾಡಿದ್ದಾರೆ.

2026 ರಲ್ಲಿ ನಮ್ಮ ಪಕ್ಷ ಗೆದ್ದು, ನಾವು ಸರ್ಕಾರ ರಚಿಸುತ್ತೇವೆ. ಅದೂ ಕೂಡ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆದ ಸೋಲಿಗೆ ಕೆಲವು ಸ್ವಾರ್ಥಿಗಳ ಕೃತ್ಯವೇ ಕಾರಣವಾಗಿದೆ. ನಾನು ಇದನ್ನೆಲ್ಲಾ ತಾಳ್ಮೆಯಿಂದ ನೋಡುತ್ತಿದ್ದೇನೆ. ಸಮಯ ಬಂದಿದೆ, ಚಿಂತಿಸಬೇಡಿ. ತಮಿಳುನಾಡಿನ ಜನರು ನಮ್ಮೊಂದಿಗಿದ್ದಾರೆ. ಈ ವಿಷಯದಲ್ಲಿ ನಾನು ತುಂಬಾ ಬಲಶಾಲಿಯಾಗಿದ್ದೇನೆ. ನಾನು ಕೂಡ ಶೀಘ್ರದಲ್ಲೇ ಯಾತ್ರೆ ಕೈಗೊಳ್ಳುವ ಯೋಜನೆ ಇದೆ ಎಂದು ಅವರು ಹೇಳಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆ ಸೋಲನ್ನು ಕಂಡಿತ್ತು. ಇದೀಗ ಇದರ ಬೆನ್ನಲ್ಲೇ ಶಶಿಕಲಾ ಅವರು ರಾಜಕೀಯಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. ಜೊತೆಗೆ 2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ನಾವು ಸರ್ಕಾರ ರಚಿಸುತ್ತೇವೆ ಎಂದು ತಿಳಿಸಿದ್ದಾರೆ.

 

Advertisement
Next Article