ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರಂಗ ಸಂಗೀತ ತರಬೇತಿ ಮತ್ತು ರಂಗಗೀತೆಗಳ ಕಲಿಕಾ ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ

07:18 AM Oct 10, 2024 IST | BC Suddi
Advertisement

 

Advertisement

  ದಾವಣಗೆರೆ : ಕನ್ನಡ ವೃತ್ತಿ ರಂಗಭೂಮಿ ರಂಗಾಯಣ ವತಿಯಿಂದ ದಾವಣಗೆರೆಯಲ್ಲಿ ರಂಗ ಸಂಗೀತ ತರಬೇತಿ ಮತ್ತು ರಂಗ ಗೀತೆಗಳ ಕಲಿಕಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಹದಿನೈದು ದಿವಸಗಳ ಕಾರ್ಯಾಗಾರದಲ್ಲಿ ಧ್ವನಿ ಸಂಸ್ಕರಣೆ, ಸಂಗೀತದ ಪ್ರಾಥಮಿಕ ಪಾಠಗಳು ಮತ್ತು ರಂಗ ಗೀತೆಗಳ ಅಭಿನಯಪೂರ್ವಕ ಕಲಿಕೆಯ ತರಬೇತಿ ನೀಡಿ, ನಂತರ ಸಾರ್ವಜನಿಕ ಪ್ರದರ್ಶನ ಏರ್ಪಡಿಸಲಾಗುವುದು.

ಸಂಗೀತದ ಪ್ರಾಥಮಿಕ ಜ್ಞಾನವುಳ್ಳ 18 ರಿಂದ 40 ವರ್ಷ ವಯೋಮಾನದೊಳಗಿನ ಅಭ್ಯರ್ಥಿಗಳು ತಮ್ಮ ಸ್ವವಿವರದೊಂದಿಗೆ ಅಕ್ಟೋಬರ್ 16 ರೊಳಗೆ ಜಿಲ್ಲಾಡಳಿತ ಭವನ, ಮೊದಲನೇ ಮಹಡಿ, ಕೊಠಡಿ ಸಂಖ್ಯೆ-38 "ಎ" ಪಿ.ಬಿ.ರಸ್ತೆ, ದಾವಣಗೆರೆ ದೂ.ಸಂ:08192-200635 ಇಲ್ಲಿ ಹೆಸರು ನೊಂದಾಯಿಸಲು ವೃತ್ತಿ  ರಂಗಾಯಣ ವಿಶೇμÁಧಿಕಾರಿ ರವಿಚಂದ್ರ ತಿಳಿಸಿದ್ದಾರೆ.

Tags :
ರಂಗ ಸಂಗೀತ ತರಬೇತಿ ಮತ್ತು ರಂಗಗೀತೆಗಳ ಕಲಿಕಾ ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ
Advertisement
Next Article