ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಯುವನಿಧಿ'ಗೆ ಈವರೆಗೆ 90,697 ಅಭ್ಯರ್ಥಿಗಳು ನೋಂದಣಿ

12:11 PM Jan 20, 2024 IST | Bcsuddi
Advertisement

ಬೆಂಗಳೂರು: ಕಾಂಗ್ರೆಸ್ ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆ ‘ಯುವನಿಧಿ’ಗೆ ರಾಜ್ಯದಾದ್ಯಂತ ಈವರೆಗೆ 90,697 ಮಂದಿ ನೋಂದಣಿ ಮಾಡಿಕೊಂಡಿದ್ದು ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅರ್ಜಿ ಸಲ್ಲಿಸಿ ಮೊದಲ ಸ್ಥಾನದಲ್ಲಿದೆ.

Advertisement

ಶುಕ್ರವಾರ ಮಧ್ಯಾಹ್ನದವರೆಗೆ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡ ಸಂಖ್ಯೆಗಳ ಪೈಕಿ ಬೆಳಗಾವಿ ಜಿಲ್ಲೆಯಿಂದ 9,633 ಅರ್ಜಿ, ಬೆಂಗಳೂರು ನಗರ - 6,657 ಹಾಗೂ ಬಾಗಲಕೋಟೆ- 4,899 ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಸಲ್ಲಿಕೆಯಲ್ಲಿ ಕೊಡಗು ಜಿಲ್ಲೆ ಕೊನೆ ಸ್ಥಾನದಲ್ಲಿದೆ.

ಏನಿದು ಯುವನಿಧಿ ಯೋಜನೆ: 2022-23ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ತೇರ್ಗಡೆ ಆಗಿ 6 ತಿಂಗಳಿನಿಂದ ಉದ್ಯೋಗ ಸಿಗದೇ ರಾಜ್ಯದಲ್ಲಿ ವಾಸ ಇರುವವರಿಗೆ ಈ ಯುವನಿಧಿ ಯೋಜನೆ ಅನ್ವಯವಾಗಲಿದೆ. ಪದವೀಧರ ನಿರುದ್ಯೋ ಗಿಗಳಿಗೆ ತಿಂಗಳಿಗೆ ₹3 ಸಾವಿರ ಮತ್ತು ಡಿಪ್ಲೊಮಾ ತೇರ್ಗಡೆಯಾದ ನಿರುದ್ಯೋಗಿಗಳಿಗೆ ತಿಂಗಳಿಗೆ ₹1,500 ಸಿಗಲಿದೆ. ನಿರುದ್ಯೋ ಗ ಭತ್ಯೆ ಎರಡು ವರ್ಷಗಳ ಅವಧಿಗೆ ಮಾತ್ರ ಇರುತ್ತದೆ.

Advertisement
Next Article