For the best experience, open
https://m.bcsuddi.com
on your mobile browser.
Advertisement

ಯುಪಿಯ ಸುಲ್ತಾನ್‌ಪುರದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

06:57 PM Sep 17, 2024 IST | BC Suddi
ಯುಪಿಯ ಸುಲ್ತಾನ್‌ಪುರದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ
Advertisement

ಯುಪಿ:ಸುಲ್ತಾನ್‌ಪುರ ಇಲ್ಲಿನ ಗ್ರಾಮವೊಂದರಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಕಂಡುಬಂದಿದೆ.

ಪ್ರತಿಮೆಯ ಧ್ವಂಸಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪರಾಧಿಗಳನ್ನು ಗುರುತಿಸಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

1996 ರಲ್ಲಿ ಛೇದವಾರಿ ಗ್ರಾಮದ ಬಳಿ ಲಕ್ನೋ-ಬಲ್ಲಿಯಾ ಹೆದ್ದಾರಿಯಲ್ಲಿ ಗ್ರಾಮಸ್ಥರು ಪ್ರತಿಮೆಯನ್ನು ಸ್ಥಾಪಿಸಿದ್ದರು. ಸೋಮವಾರ ರಾತ್ರಿ ಅದನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Author Image

Advertisement