For the best experience, open
https://m.bcsuddi.com
on your mobile browser.
Advertisement

'ಯಾವುದೇ ಪಕ್ಷದವರಾಗಿರಲಿ ರಾಷ್ಟ್ರ ಸೇವೆ ಎಂಬುದು ಸಂಸದನಿಗೆ ಮೊದಲ ಜವಾಬ್ದಾರಿ'- ಮೋದಿ

04:38 PM Jul 02, 2024 IST | Bcsuddi
 ಯಾವುದೇ ಪಕ್ಷದವರಾಗಿರಲಿ ರಾಷ್ಟ್ರ ಸೇವೆ ಎಂಬುದು ಸಂಸದನಿಗೆ ಮೊದಲ ಜವಾಬ್ದಾರಿ   ಮೋದಿ
Advertisement

ನವದೆಹಲಿ: ಯಾವುದೇ ಪಕ್ಷದವರಾಗಿರಲಿ ರಾಷ್ಟ್ರ ಸೇವೆ ಎಂಬುದು ಪ್ರತಿಯೊಬ್ಬ ಸಂಸದನಿಗೂ ಮೊದಲ ಜವಾಬ್ದಾರಿಯಾಗಿರಬೇಕು, ಬೇರೆಯವರನ್ನು ಟೀಕಿಸುವ ಮುನ್ನ ವಿಷಯಗಳ ಅಧ್ಯಯನ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಂಸದರಿಗೆ ಸಲಹೆ ನೀಡಿದ್ದಾರೆ.

ಮೂರನೇ ಅವಧಿಗೆ ಚುನಾಯಿತರಾದ ಬಳಿಕ ಎನ್‌ಡಿಎ ಸಂಸದರನ್ನುದ್ದೇಶಿಸಿ ಮಾಡಿದ ಮೊದಲ ಔಪಚಾರಿಕ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸದರಿಗೆ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದರು.

ಕಲಿಯಲು ಸಂಸತ್ತಿಗಿಂತ ಉತ್ತಮ ಸ್ಥಳವಿಲ್ಲ, ಮಹಾನ್ ಪ್ರಯಾಣದ ಬಗ್ಗೆ ತಿಳಿಯಲು ಮತ್ತು ಅವರ ಅನುಭವದಿಂದ ಕಲಿಯಲು ಅವರು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬೇಕು ಎಂದು ಮೋದಿ ಹೇಳಿದ್ದಾರೆ.

Advertisement

ಸಂಸದರು ದೇಶ ಸೇವೆ ಮಾಡಲು ಇಲ್ಲಿಗೆ ಬಂದಿದ್ದಾರೆ ಮತ್ತು ರಾಷ್ಟ್ರವನ್ನು ಯಾವಾಗಲೂ ಮೊದಲ ಸ್ಥಾನದಲ್ಲಿರಿಸಲು ಎಲ್ಲರಿಗೂ ಸಲಹೆ ನೀಡಿದ್ದಾರೆ. ಎನ್​ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಎನ್​ಡಿಎ ಸಂಸದರಿಗೆ ಸಂಸದೀಯ ನಿಯಮಗಳು ಹಾಗೂ ನಡವಳಿಕೆಯನ್ನು ಅನುಸರಿಸುವಂತೆ, ಸಂಸದರು ನಿಯಮಿತವಾಗಿ ಸಂಸತ್ತಿಗೆ ಹಾಜರಾಗಬೇಕು. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಬೇಕು ಎಂದು ಹೇಳಿದರು.

ಯಾವುದೇ ವಿಷಯದ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುವ ಮೊದಲು ಅದನ್ನು ಅಧ್ಯಯನ ಮಾಡುವಂತೆ ಸೂಚಿಸಿದರು. ಎನ್​ಡಿಎ ಸಂಸದರು ಸಾರ್ವಜನಿಕವಾಗಿ ಮಾತನಾಡುವುದರಲ್ಲಿ ಏಕರೂಪತೆ ಇರಬೇಕು, ಸಂಸದರು ಕ್ಷೇತ್ರಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ಬೆಂಬಲ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವಂತೆ ಸಲಹೆ ನೀಡಿದರು.

Author Image

Advertisement