ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಯಾವುದೇ ಕೋಚಿಂಗ್ ಸೇರದೆ UPSC ಪಾಸ್‌ ಮಾಡಿದ 23 ವರ್ಷದ ಯುವತಿ

09:39 AM Sep 07, 2024 IST | BC Suddi
Advertisement

ಉತ್ತರ ಪ್ರದೇಶ:ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಐಎಎಸ್-ಐಪಿಎಸ್ ಆಗುವ ಕನಸಿನೊಂದಿಗೆ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನ ತೆಗೆದುಕೊಳ್ಳುತ್ತಾರೆ. ಅದರಲ್ಲಿ ಸುಮಾರು ಒಂದು ಸಾವಿರ ಅಭ್ಯರ್ಥಿಗಳ ಅಂತಿಮವಾಗಿ ಆಯ್ಕೆಯಾಗುತ್ತಾರೆ. ಆದರೆ ಕೆಲವರು ಯಾವುದೇ ಕೋಚಿಂಗ್ ಇಲ್ಲದೆ ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಎಎಸ್ ಆಗುತ್ತಾರೆ. ಅಂತಹ ಐಎಎಸ್ ಅಧಿಕಾರಿ ಅದಿತಿ ವರ್ಷ್ಣಿ ಅವರ ಯಶಸ್ಸಿನ ಕಥೆ ಇಲ್ಲಿದೆ.

Advertisement

ಅದಿತಿ ವರ್ಷ್ನಿ ಉತ್ತರ ಪ್ರದೇಶದ ಬರೇಲಿ ನಿವಾಸಿ. ಅವರ ಶಾಲಾ ಶಿಕ್ಷಣವನ್ನು ಬರೇಲಿಯ ಬಿಷಪ್ ಕೊನ್ರಾಡ್ ಶಾಲೆಯಲ್ಲಿ ಮಾಡಿದ್ದಾರೆ. ಅವರ ತಂದೆ ಸ್ಥಳೀಯ ಬಟ್ಟೆ ವ್ಯಾಪಾರಿ ಮತ್ತು ತಾಯಿ ಗೃಹಿಣಿ. ವರದಿಗಳ ಪ್ರಕಾರ, ಅದಿತಿ ಯುಪಿಎಸ್‌ಸಿ ಪರೀಕ್ಷೆಗೆ ಯಾವುದೇ ಕೋಚಿಂಗ್‌ಗೆ ಸೇರದೇ ಉತ್ತೀರ್ಣರಾಗಿದ್ದಾರೆ.

ಅದಿತಿ ದೆಹಲಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಬಿಎ ಆನರ್ಸ್) ಪದವಿಯನ್ನು ಪಡೆದಿದ್ದಾರೆ. ಇದಾದ ನಂತರ ಅವರು ಸ್ನಾತಕೋತ್ತರ ಪದವಿಗೆ ದಾಖಲಾದರು. ಆದರೆ ಮಧ್ಯದಲ್ಲೇ ವ್ಯಾಸಂಗ ಬಿಟ್ಟು UPSCಗೆ ತಯಾರಿ ಆರಂಭಿಸಿದರು. ಅವರು ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಆಲ್ ಇಂಡಿಯಾ ರ್ಯಾಂಕ್​ನಲ್ಲಿ 57ನೇ ಸ್ಥಾನ ಪಡೆದಿದ್ದಾರೆ.

 

 

Advertisement
Next Article