ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮ್ಯಾನ್ಮಾರ್‌‌ನಲ್ಲಿರುವ ಉಲ್ಫಾ-I ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿದ ಭಾರತ

05:17 PM Jan 09, 2024 IST | Bcsuddi
Advertisement

ಗುವಾಹಟಿ: ಪರೇಶ್ ಬರುವಾ ನೇತೃತ್ವದ ಉಲ್ಫಾ-I ಉಗ್ರರ ಸಂಘನೆಯು ಮ್ಯಾನ್ಮಾರ್‌ ನಲ್ಲಿರುವ ತನ್ನ ಶಿಬಿರದ ಮೇಲೆ ಭಾರತ ಡ್ರೋನ್‌ ಮೂಲಕ ಭಾನುವಾರ ದಾಳಿ ನಡೆಸಿದೆ ಎಂದು ಸೋಮವಾರ ಹೇಳಿಕೊಂಡಿದೆ.

Advertisement

ಭಾರತವು ಭಾನುವಾರ ಸಂಜೆ ಮೊದಲ ಬಾಂಬ್ ಅನ್ನು 4:10ಕ್ಕೆ ಹಾಗೂ ಎರಡನೇ ಬಾಂಬ್ ಅನ್ನು 4:12ಕ್ಕೆ ಮತ್ತು ಹಾಗೂ ಮೂರನೇ ಬಾಂಬ್ ಅನ್ನು 4:20 ಕ್ಕೆ ಹೀಗೆ ಒಟ್ಟು ಮೂರು ಬಾಂಬ್‌ಗಳನ್ನು ಡ್ರೋನ್‌ಗಳಿಂದ ಬೀಳಿಸಿದೆ. ಈ ದಾಳಿಯಲ್ಲಿ ಸಂಘನೆಯ ಇಬ್ಬರು ಗಾಯಗೊಂಡಿದ್ದಾರೆ. ಈ ದಾಳಿಯನ್ನು ಭಾರತೀಯ ಭದ್ರತಾ ಪಡೆಗಳು ನಡೆಸಿವೆ ಎಂದು ಉಗ್ರ ಸಂಘಟನೆ ಹೇಳಿದೆ.

ಮೊದಲೆರಡು ಸ್ಪೋಟಗಳಲ್ಲಿ ನಮ್ಮ ಸಂಘಟನೆಯ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಬೀಳಿಸಿದ ಮೂರನೇ ಬಾಂಬ್ ಸ್ಫೋಟಗೊಂಡಿಲ್ಲ. ಭಾರತ ಈ ರೀತಿಯ ದಾಳಿ ನಡೆಸುವುದರಿಂದ ನಾವು ನಮ್ಮ ಉದ್ದೇಶದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದೆ.

ಇನ್ನು ಉಲ್ಫಾ-I ಉಗ್ರರ ಸಂಘನೆಯ ಮೇಲಿನ ದಾಳಿಯ ಕುರಿತಂತೆ ಭಾರತದ ವಿದೇಶಾಂಗ ಸಚಿವಾಲಯ ಇದುವರೆಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

Advertisement
Next Article