For the best experience, open
https://m.bcsuddi.com
on your mobile browser.
Advertisement

ಮೌಲ್ವಿಗೆ 'ಜಿ' ಸಿರೀಸ್ ಕಾರ್ ಯಾಕೆ? ಇದೆಲ್ಲ ವೇಸ್ಟ್ - ಯತ್ನಾಳ್

09:26 AM Aug 06, 2024 IST | BC Suddi
ಮೌಲ್ವಿಗೆ  ಜಿ  ಸಿರೀಸ್ ಕಾರ್ ಯಾಕೆ  ಇದೆಲ್ಲ ವೇಸ್ಟ್   ಯತ್ನಾಳ್
Advertisement

ಬೆಂಗಳೂರು: ಆಗಸ್ಟ್‌ 2 ರಂದು ಬೆಂಗಳೂರಿನ ಸಿಎಂ ಕಾನ್ವೆನ್ಶನ್‌ನಲ್ಲಿ ಸುನ್ನಿ ಕೋಆರ್ಡಿನೇಷನ್‌ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಸಮಾರಂಭದ ಮುಖ್ಯ ಅತಿಥಿ ಆಗಮಿಸಿದ್ದ ರೀತಿಯೇ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಮುಸ್ಲಿಮ್ ಮೌಲ್ವಿಯೊಬ್ಬರು 'ಜಿ' ಸಿರೀಸ್ ಕಾರ್‌ನಲ್ಲಿ ಬಂದಿದ್ದು ಹೆಚ್ಚು ಸದ್ದು ಮಾಡ್ತಿದೆ. ಇದಿಷ್ಟೇ ಅಲ್ಲ, ಅವರಿಗೆ ಪೊಲೀಸ್‌ ಭದ್ರತೆ ಪ್ರೊಟೋಕಾಲ್‌ ಅನ್ನೂ ನೀಡಲಾಗಿದೆ. ಇದೇ ವಿಚಾರವನ್ನು ಬಸನಗೌಡ ಪಾಟೀಲ್‌ ಯತ್ನಾಳ್‌ ಸೋಶಿಯಲ್‌ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

ಅದರೊಂದಿಗೆ ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ, ಕರ್ನಾಟಕ ಡಿಜಿಪಿಗೆ ಟ್ಯಾಗ್‌ ಮಾಡಿದ್ದಾರೆ. ಟ್ವೀಟ್‌ ಮಾಡಿರುವ ಯತ್ನಾಳ್‌, 'ಸರ್ಕಾರಕ್ಕೆ ಸಂಬಂಧವೇ ಇಲ್ಲದ ಈ ವ್ಯಕ್ತಿಗೆ ಯಾಕೆ 'ಜಿ' ಸಿರೀಸ್‌ ಕಾರ್‌ಅನ್ನು ಹಾಗೂ ಪೊಲೀಸ್‌ ಭದ್ರತೆ & ಪ್ರೊಟೋಕಾಲ್‌ಅನ್ನು ನೀಡಲಾಗಿದೆ.

Advertisement

ಇದು ಶಿಷ್ಟಾಚಾರದ ನಿಯಗಳನ್ನು ಉಲ್ಲಂಘಿಸಿದ ಹಾಗೆ ಅಲ್ಲವೇ. ಅಲ್ಪಸಂಖ್ಯಾತರ ಮತಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಮುಖಂಡರಿಗೆ ಅನುಕೂಲಗಳು ಮತ್ತು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದು ನಿಯಮಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲದೆ ತೆರಿಗೆದಾರರ ಹಣದ ಬೃಹತ್ ವ್ಯರ್ಥವೂ ಆಗಿದೆ. ರಾಜ್ಯವು ಮಳೆಯ ಅಬ್ಬರಕ್ಕೆ ತತ್ತರಿಸಿರುವ ಸಂದರ್ಭದಲ್ಲಿ ಸರ್ಕಾರ ಹೀಗೆ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

Author Image

Advertisement