ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮೋದಿ 3.02 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ

11:58 AM May 15, 2024 IST | Bcsuddi
Advertisement

ನವದೆಹಲಿ: ಮೂರನೇ ಬಾರಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ಮಾಡಿದ್ದು ಒಟ್ಟು 3.02 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಘೋಷಣೆ ಮಾಡಿದ್ದಾರೆ.

Advertisement

52,920 ರೂಪಾಯಿ ನಗದು ಹೊಂದಿದ್ದು, ಜಮೀನು, ಮನೆ, ಕಾರು ಹೊಂದಿಲ್ಲ. ಮೋದಿ ಯಾವುದೇ ಕಂಪನಿಯಲ್ಲಿ ಷೇರು ಖರೀದಿಸಿಲ್ಲ, ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿಲ್ಲ  ಎಂದು  ಉಲ್ಲೇಖಿಸಿದ್ದಾರೆ.

2018-19 ರ ಆರ್ಥಿಕ ವರ್ಷದಲ್ಲಿ 11,14,230 ರೂ. ಆದಾಯವಿದ್ದರೆ 2022-23 ರಲ್ಲಿ ಇದು 23,56,080 ರೂ.ಗೆ ಏರಿಕೆಯಾಗಿದೆ. ಮೋದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾರೆ. ಗಾಂಧಿನಗರ ಎಸ್‌ಬಿಐನ ಶಾಖೆಯಲ್ಲಿ 73,304 ರೂ.ಗಳನ್ನು ಠೇವಣಿ ಇರಿಸಿದ್ದರೆ, ವಾರಣಾಸಿ ಎಸ್‌ಬಿಐನ ಶಾಖೆಯಲ್ಲಿ ಕೇವಲ 7,000 ರೂ ಠೇವಣಿ ಇರಿಸಿದ್ದಾರೆ.

ಎಸ್‌ಬಿಐನಲ್ಲಿ 2,85,60,338 ರೂಪಾಯಿ ಮೌಲ್ಯದ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದಾರೆ. ಪ್ರಧಾನಿಯವರ ಬಳಿ 2,67,750 ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. ನ್ಯಾಷನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ನಲ್ಲಿ 9,12,398 ರೂ. ಎಂದು ಘೋಷಿಸಿದ್ದಾರೆ.

 

Advertisement
Next Article