For the best experience, open
https://m.bcsuddi.com
on your mobile browser.
Advertisement

ಮೊಬೈಲ್ ಫೋನ್ ನೆಟ್ವರ್ಕ್ ಟವರ್ ಕಳ್ಳತನ.!

08:00 AM Oct 24, 2024 IST | BC Suddi
ಮೊಬೈಲ್ ಫೋನ್ ನೆಟ್ವರ್ಕ್ ಟವರ್ ಕಳ್ಳತನ
Advertisement

ಶಿವಮೊಗ್ಗ: ಹೌದು ನೀವು ಸಾಮಾನ್ಯವಾಗಿ ಮೊಬೈಲ್ ಫೋನ್ ಕಳವು ಮಾಡುವುದನ್ನು ಕೇಳಿರುತ್ತೀರ ಅಲ್ವ   ಆದರೆ, ಕಳ್ಳರು ಮೊಬೈಲ್ ಫೋನ್ ನೆಟ್ವರ್ಕ್ ಟವರ್ ಅನ್ನೇ ಕಳವು ಮಾಡಿದ ಘಟನೆಯನ್ನು ಕೇಳಿದ್ದೀರ.?

ಈ ಘಟನೆ ನಡೆದಿರುವುದು ಶಿವಮೊಗ್ಗದ ಟಿಪ್ಪು ನಗರದ ಖಾಲಿ ನಿವೇಶನದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಯೊಂದು 2008 ರಲ್ಲಿ ಮೊಬೈಲ್ ಫೋನ್ ನೆಟ್ವರ್ಕ್ ಟವರ್ ಅಳವಡಿಸಿತ್ತು. ಕೊರೋನಾ ನಂತರ ಟವರ್ ನಿರ್ವಹಣೆ ಮಾಡಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಖಾಸಗಿ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡಿದಾಗ ಮೊಬೈಲ್ ಟವರ್ ಸ್ಥಳದಲ್ಲಿ ಇರಲಿಲ್ಲ.

Advertisement

ಈ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು, ಕೋರ್ಟ್ ಸೂಚನೆಯಂತೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 46.30 ಲಕ್ಷ ರೂ. ಮೌಲ್ಯದ ಮೊಬೈಲ್ ಟವರ್ ಕಳವು ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ತುಂಗಾನಗರ ಠಾಣೆ ಪೋಲೀಸರು ತನಿಖೆ ಕೈಗೊಂಡಿದ್ದಾರೆ.!

Tags :
Author Image

Advertisement