ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮೊದಲ ಗರ್ಲ್‌ಫ್ರೆಂಡ್‌ ಬಗ್ಗೆ ಬಾಯಿಬಿಟ್ಟ ನಟ ಟೈಗರ್‌ ಶ್ರಾಫ್‌

12:34 PM Mar 22, 2024 IST | Bcsuddi
Advertisement

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರು ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಕಾರ್ಯಕ್ರಮವೊಂದಲ್ಲಿ ಮೊದಲ ಗರ್ಲ್‌ಫ್ರೆಂಡ್‌ ಬಗ್ಗೆ ಟೈಗರ್‌ ಶ್ರಾಫ್‌ ಬಾಯ್ಬಿಟ್ಟಿದ್ದಾರೆ. ಅವರು 25ನೇ ವಯಸ್ಸಿಗೆ ಎಂಗೇಂಜ್‌ ಆಗಿದ್ದರ ಬಗ್ಗೆ ತಿಳಿಸಿದ್ದಾರೆ.

Advertisement

ಮೊದಲ ಪ್ರೇಯಸಿ ಬಗ್ಗೆ ಮಾತನಾಡಿರೋದು ಬಾಲಿವುಡ್‌ ನಟ ವರುಣ್‌ ಧವನ್‌ಗೆ ಅಚ್ಚರಿ ಮೂಡಿಸಿದೆ. ಅಲ್ಲದೇ ವೇದಿಕೆಯಲ್ಲಿ ವರುಣ್ ಧವನ್ ಜೊತೆ ಮಾತನಾಡುವಾಗ ನಾನು ನಾಚಿಕೆ ಸ್ವಭಾವದ ವ್ಯಕ್ತಿ ಹಾಗಾಗಿ ನನಗೆ ಮೊದಲ ಗರ್ಲ್‌ಫ್ರೆಂಡ್‌ ಸಿಕ್ಕಿದ್ದೆ, 25 ವರ್ಷ ಆದಾಗ ಎಂದು ಟೈಗರ್ ಶ್ರಾಫ್ ಹೇಳಿದ್ದಾರೆ. ನೀನು ಸೀರಿಯಸ್‌ ಆಗಿ ಹೇಳ್ತಿದ್ದೀಯಾ? ಎಂದು ಶಾಕ್ ಆಗಿ ವರುಣ್ ಧವನ್ ಕೇಳಿದ್ದಾರೆ.

ನಿಜ ನನಗೆ ಮೊದಲ ಗರ್ಲ್‌ಫ್ರೆಂಡ್‌ ಸಿಕ್ಕಿದ್ದು 25 ವರ್ಷ ಆದಾಗ, ನನ್ನ ಮೊದಲ ಚಿತ್ರದ ಆಡಿಷನ್ ಸಮಯದಲ್ಲಿ ಎಂದಿದ್ದಾರೆ. ತಕ್ಷಣವೇ ಕೃತಿ ಸನೋನ್ ಅಲ್ವಾ? ಎಂದು ವರುಣ್ ಧವನ್ ಹೇಳಿದ್ದಾರೆ.  ಟೈಗರ್ ಶ್ರಾಫ್ ನಗುತ್ತಲೇ ಅವರಲ್ಲ ಬಿಡಿ ಎಂದು ಸ್ಟಷ್ಟನೆ ನೀಡಿದ್ದಾರೆ.

ಸದ್ಯ ನಟ ಮಾತನಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಇತ್ತ ನೆಟ್ಟಿಗರು ದಿಶಾ ಪಟಾನಿ ಅವರು ಮೊದಲ ಗರ್ಲ್‌ಫ್ರೆಂಡ್‌ ಅಲ್ವಾ? ಎಂದು ಕಾಲೆಳೆಯುತ್ತಿದ್ದಾರೆ

ಟೈಗರ್ ಶ್ರಾಫ್ ಅವರು ಹೀರೋಪಂತಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರಕ್ಕೆ ಕೃತಿ ಸನೋನ್ ನಾಯಕಿಯಾಗಿದ್ದರು.

Advertisement
Next Article