For the best experience, open
https://m.bcsuddi.com
on your mobile browser.
Advertisement

ಮೊಟ್ಟೆ– ತರಕಾರಿ ಆಮ್ಲೆಟ್ ಮಾಡುವ ವಿಧಾನ

09:07 AM Jun 10, 2024 IST | Bcsuddi
ಮೊಟ್ಟೆ– ತರಕಾರಿ ಆಮ್ಲೆಟ್ ಮಾಡುವ ವಿಧಾನ
Advertisement

ಮನೆಯಲ್ಲಿ ಮೊಟ್ಟೆ ಇದ್ದರೆ ದಿಢೀರ್ ಅಂತ ಆಮ್ಲೆಟ್ ಮಾಡಿ ಸವಿಯುತ್ತೇವೆ. ಅದೇ ಆಮ್ಲೆಟ್ ಮತ್ತಷ್ಟು ರುಚಿಯಾಗ ಬೇಕೆಂದರೆ ಸ್ವಲ್ಪ ತರಕಾರಿ ಹಾಕಿ ತಯಾರಿಸಬಹುದು. ಇಲ್ಲಿದೆ ಮೊಟ್ಟೆ– ತರಕಾರಿ ಆಮ್ಲೆಟ್ ತಯಾರಿಸುವ ವಿಧಾನ. ಬೇಕಾಗುವ ಸಾಮಾಗ್ರಿಗಳು ಮೊಟ್ಟೆ – 3 ಈರುಳ್ಳಿ -1 ಕ್ಯಾರೆಟ್ -1 ಬೀನ್ಸ್ -5 ಹಸಿಮೆಣಸಿನಕಾಯಿ -2 ಕ್ಯಾಪ್ಸಿಕಂ -1/2 ಕೊತ್ತಂಬರಿ ಸೊಪ್ಪು ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ ಅರಿಶಿಣ ಪುಡಿ – 1/2 ಚಮಚ ಕರಿಬೇವಿನ ಸೊಪ್ಪು – 4-5 ಎಲೆ ಪೆಪ್ಪರ್‌ಪುಡಿ – ಅಗತ್ಯವಿದ್ದಷ್ಟು ಎಣ್ಣೆ ಸ್ವಲ್ಪ ಸಾಸಿವೆ – 1 ಚಮಚ ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ ಈರುಳ್ಳಿ, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಗಳನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ. ಹಸಿಮೆಣಸಿನಕಾಯಿ, ಕರಿಬೇವು, ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್, ಬೀನ್ಸ್, ಕೊತ್ತಂಬರಿಸೊಪ್ಪು, ಪೆಪ್ಪರ್‌ಪುಡಿ, ಉಪ್ಪು ಮತ್ತು ಅರಿಶಿಣ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಮೊಟ್ಟೆಯನ್ನು ಒಡೆದು ಬಟ್ಟಲಿಗೆ ಹಾಕಿ ಚೆನ್ನಾಗಿ ಗೊಟಾಯಿಸಿದ ನಂತರ ಉಪ್ಪು, ಫ್ರೈ ಮಾಡಿದ ಪದಾರ್ಥಗಳನ್ನು ಆರಿದ ಮೇಲೆ ಹಾಕಿ ಚೆನ್ನಾಗಿ ಕಲೆಸಿ. ಒಲೆಯ ಮೇಲೆ ಫ್ರೈ ಪ್ಯಾನ್ ಇರಿಸಿ ಎಣ್ಣೆ ಸವರಿ ಖಾದ ನಂತರ ಮೊಟ್ಟೆ ಮಿಶ್ರಣವನ್ನು ಹಾಕಿ ದೋಸೆ ರೀತಿ ವೃತ್ತಾಕಾರದಲ್ಲಿ ಹರಡಬೇಕು. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಒಂದು ಬದಿಯನ್ನು ಚೆನ್ನಾಗಿ ಬೇಯಿಸಿದ ನಂತರ ಮುಚ್ಚಳ ತೆಗೆದು, ಮಗುಚಿ ಹಾಕಿ ಇನ್ನೊಂದು ಬದಿಯನ್ನು ಚೆನ್ನಾಗಿ ಬೇಯಿಸಿ. ಈಗ ಮೊಟ್ಟೆ– ತರಕಾರಿ ಆಮ್ಲೆಟ್ ಊಟದ ಜೊತೆ ನೆಂಚಲು ರೆಡಿ.

Author Image

Advertisement