ಮೈಸೂರು ಪಾಕ್ ಗೆ ಫಿದಾ ಆದ ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿ
02:19 PM Nov 07, 2023 IST
|
Bcsuddi
Advertisement
ಮೈಸೂರು : ಕೆಡಿ ಸಿನೆಮಾ ಶೂಟಿಂಗ್ ಗಾಗಿ ಮೈಸೂರಿಗೆ ಆಗಮಿಸಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ತಾವು ಮೈಸೂರು ಪಾಕ್ ಸ್ವೀಟ್ ನ್ನು ಸವಿಯುತ್ತಿರುವ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಈ ಭಾಗದ ಚಿತ್ರೀಕರಣಕ್ಕಾಗಿ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಮೈಸೂರಿಗೆ ಬಂದಿಳಿದಿದ್ದಾರೆ. ಮೈಸೂರು ಪಾಕ್ ಸವಿದಿದ್ದಾರೆ. ಜೊತೆಗೆ ಜಹಾಂಗೀರ್ ಸೇರಿದಂತೆ ವಿವಿಧ ಸಿಹಿ ಪದಾರ್ಥಗಳನ್ನು ಸವಿದಿದ್ದು ಅದರ ವಿಡಿಯೋ ವೈರಲ್ ಆಗಿದೆ.ಬೆಡಗಿ ಶಿಲ್ಪಾ ಸಿಹಿ ಪದಾರ್ಥಗಳಿಂದ ದೂರವೇ ಉಳಿದವರು. ಆದರೂ ಅವರು ಆಗಾಗ್ಗೆ ಇಂಥ ಸಿಹಿಗಳನ್ನು ತಿನ್ನುವುದು ಉಂಟು. ಅಷ್ಟಕ್ಕೂ ಅವರಿಗೆ ಕರ್ನಾಟಕವೇನೂ ಹೊಸದಲ್ಲವಲ್ಲ. ಮಂಗಳೂರಿನ ಬೆಡಗಿ ಕನ್ನಡತಿ ಇವರು. ಇಲ್ಲಿಯ ಪರಿಚಯವೂ ಚೆನ್ನಾಗಿಯೇ ಇದೆ. ಇದೀಗ ಮೈಸೂರಿನ ಮೈಸೂರು ಪಾಕ್ ಮತ್ತು ಇತರ ಖಾದ್ಯಗಳನ್ನು ತಮ್ಮ ತಂಡದ ಜೊತೆ ಸವಿದಿದ್ದು, ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
Advertisement
Next Article