ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮೈಸೂರಿನ ಅರುಣ್‌ ಯೋಗಿರಾಜ್‌ ಕೆತ್ತಿದ ರಾಮಲಲ್ಲಾನ ಮೂರ್ತಿ ಆಯ್ಕೆ

06:04 PM Jan 15, 2024 IST | Bcsuddi
Advertisement

ಹೊಸದಿಲ್ಲಿ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಗೊಳ್ಳಲು ಮೈಸೂರುಮೂಲದ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ ರಾಮಲಲ್ಲಾನ ಪ್ರತಿಮೆ ಆಯ್ಕೆಯಾಗಿದೆ ಎಂದು ಈ ಕುರಿತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟಪಡಿಸಿದ್ದಾರೆ.ಪ್ರಸ್ತುತ ರಾಮ ಲಲ್ಲಾ ಪ್ರತಿಮೆಯನ್ನು ಹೊಸ ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುವುದು ಎಂದಿದ್ದಾರೆ. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್, ಬೆಂಗಳೂರಿನ ಗಣೇಶ್‌ ಭಟ್‌, ರಾಜಸ್ಥಾನದ ಸತ್ಯನಾರಾಯಣ ಸೇರಿ ಮೂವರು ಶಿಲ್ಪಿಗಳು ರಾಮನ ಪ್ರತಿಮೆ ಕೆತ್ತಿದ್ದಾರೆ.

Advertisement

ಆರು ತಿಂಗಳ ಕಾಲ ಅರುಣ್ ಯೋಗಿರಾಜ್ ಅವರು ಮೂರ್ತಿಯ ಬಗ್ಗೆ ಕೆಲಸ ನಿರ್ವಹಿಸಿದ್ದಾರೆ. ಸುಮಾರು ಎಂಟು ಅಡಿ ಎತ್ತರದ ವಿಗ್ರಹವು ಮೂರೂವರೆ ಅಡಿ ಅಗಲವನ್ನು ವ್ಯಾಪಿಸಿದ್ದು, ಸುತ್ತಲೂ ವಿಸ್ತಾರವಾದ ಪ್ರಭಾವಳಿಯನ್ನು ಒಳಗೊಂಡಿದೆ. ಅಲ್ಲದೇ ಪ್ರತಿಮೆಯು ಬಾಲ್ಯದಲ್ಲಿ ಭಗವಾನ್ ರಾಮನನ್ನು ಬಿಂಬಿಸುತ್ತದೆ.

Advertisement
Next Article