ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮೆಕ್ಕಾಗೆ ಯಾತ್ರೆ ಕೈಗೊಂಡ 18 ಲಕ್ಷ ಭಾರತೀಯ ಮುಸ್ಲಿಮರು: ಜಾಗತಿಕ ಮಟ್ಟದಲ್ಲೇ 3ನೇ ಸ್ಥಾನ

11:14 AM Dec 28, 2023 IST | Bcsuddi
Advertisement

ನವದೆಹಲಿ: ಇಸ್ಲಾಂ ಧರ್ಮದ ಅನುಯಾಯಿಗಳಿಗೆ ಪವಿತ್ರ ಸ್ಥಳವಾಗಿರುವ ಮೆಕ್ಕಾಗೆ ಹಜ್ ಯಾತ್ರೆಯನ್ನು ಈ ಬಾರಿ 18 ಲಕ್ಷ ಭಾರತೀಯ ಮುಸ್ಲಿಮರು ಕೈಗೊಂಡಿದ್ದು, ಇದು ಜಾಗತಿಕ ಮಟ್ಟದಲ್ಲೇ 3ನೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಸೌದಿ ಅರೇಬಿಯಾ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪವಿತ್ರ ಯಾತ್ರೆ ಕೈಗೊಳ್ಳುವವರಿಗೆ ಸೌದಿ ಸರ್ಕಾರ ನೀಡುತ್ತಿರುವ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದ ಸೌದಿ ಅರೇಬಿಯಾದ ಹಜ್‌ ಹಾಗೂ ಉಮ್ರಾದ ಸಚಿವ ಡಾ. ತೌಫಿಕ್‌ ಬಿನ್ ಫಝಾನ್‌ ಅಲ್ ರಾಬಿಯಾ ಅವರು, ಮೆಕ್ಕಾಗೆ ಯಾತ್ರೆಯನ್ನು ವರ್ಷದ ಯಾವುದೇ ಸಮಯದಲ್ಲಿ ಕೈಗೊಳ್ಳಬಹುದಾಗಿದೆ.

ಉಮ್ರಾ ಮತ್ತು ಪ್ರವಾದಿ ಅವರ ಮಸೀದಿಗೆ ಭೇಟಿ ನೀಡುವವರ ಅನುಕೂಲಕ್ಕಾಗಿ ಎಲೆಕ್ಟ್ರಾನಿಕ್ ವೀಸಾ ಮತ್ತು ಸ್ವಯಂಚಾಲಿತ ಪ್ರವೇಶ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜೊತೆಗೆ ಉಮ್ರಾ ಯಾತ್ರೆ ಕೈಗೊಳ್ಳುವವರಿಗೆ ನೆರವಾಗುವ ಖಾಸಗಿ ಕಂಪನಿಗಳಿಗೆ ತರಬೇತಿ ಹಾಗೂ ಯಾತ್ರಿಗಳ ಸಂಪರ್ಕ ಹೊಂದುವ ಸೌಲಭ್ಯಗಳ ಕುರಿತು ತರಬೇತಿಯನ್ನೂ ನೀಡಲಾಗಿತ್ತು ಎಂದರು.

ಇನ್ನು ಮೆಕ್ಕಾಗೆ ಯಾತ್ರೆ ಕೈಗೊಂಡ ಭಾರತೀಯ ಮುಸ್ಲಿಮರ ಅಂಕಿ- ಅಂಶ ತಿಳಿಸಿದ ಸೌದಿ ಅರೇಬಿಯಾ ಸರ್ಕಾರ, ಉಳಿದೆರಡು ದೇಶಗಳ ಹೆಸರನ್ನು ಬಹಿರಂಗಪಡಿಸಿಲ್ಲ.

Advertisement
Next Article