ಮೆಂತೆ ಸೊಪ್ಪಿನಲ್ಲಿರುವ ಆರೋಗ್ಯ ಪ್ರಯೋಜನಗಳು
ನಿತ್ಯದ ಆಹಾರದಲ್ಲಿ ಮೆಂತೆ ಬಳಕೆ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಕಂಡುಕೊಳ್ಳಬಹುದು. ಮೆಂತೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧವನ್ನಾಗಿ ಉಪಯೋಗಿಸುತ್ತಾರೆ. ಪೌಷ್ಟಿಕಾಂಶದ ಆಗರವಾಗಿರುವ ಮೆಂತೆ ಸೊಪ್ಪಿನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳು ಹೊಂದಿದೆ.
ಉದಾಹರಣೆಗೆ ಹೊಟ್ಟೆ ನೋವು, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆ ಎಲೆಗಳಿಂದ ಮನೆಔಷಧಿ ತಯಾರಿಸಬಹುದು. ಅಂದಹಾಗೆ ಅನಾದಿ ಕಾಲದಿಂದಲೂ ನಮ್ಮ ಹಿರಿಯರು, ಪಂಡಿತರು ಮೆಂತ್ಯ ಎಲೆಗಳನ್ನು ಮಧುಮೇಹ, ಮಲಬದ್ಧತೆ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಅದರಲ್ಲಿಯೂ ಚಳಿಗಾಲದಲ್ಲಿ ಮೆಂತ್ಯ ಸೊಪ್ಪನ್ನು ತಿನ್ನುವುದು ಬಹಳ ಒಳ್ಳೆಯದು. ದುರ್ಬಲ ಯಕೃತ್ತಿನ ಕ್ರಿಯೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೆ ಮೆಂತ್ಯ ಸೊಪ್ಪು ತುಂಬಾ ಉಪಯುಕ್ತವಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆಗಳು ಮತ್ತು ಕರುಳಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮೆಂತ್ಯವು ತುಂಬಾ ಉಪಯುಕ್ತವಾಗಿದೆ. ಅಜೀರ್ಣ ಮತ್ತು ಅತಿಸಾರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಮೆಂತ್ಯವು ಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಹೀಗಾಗಿ ಹೃದಯದಲ್ಲಿ ಹಠಾತ್ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.ಮೆಂತ್ಯವು ರಕ್ತದ ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ನಂಬಲಾಗದಷ್ಟು ಬಲವಾದ ಪರಿಣಾಮವನ್ನು ಬೀರುತ್ತದೆ. ಇದು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಮತ್ತು ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ದೇಹದಲ್ಲಿ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ ಅನ್ನು ಹೆಚ್ಚಿಸುತ್ತದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ