ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಮೂಲ ಸೌಕರ್ಯಗಳ ಕೊರತೆ' : ರಾಜ್ಯದ 27 ವೈದ್ಯಕೀಯ ಕಾಲೇಜುಗಳಿಗೆ ದಂಡದ ಬರೆ

10:19 AM Jul 09, 2024 IST | Bcsuddi
Advertisement

ಬೆಂಗಳೂರು: ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ರಾಜ್ಯದ 27 ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ದಂಡ ವಿಧಿಸಿದೆ. ಅಗತ್ಯ ಸಂಖ್ಯೆಯ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳದೇ ಇರುವುದು, ಪ್ರಯೋಗಾಲಯಗಳ ಕೊರತೆ, ಕಳಪೆ ಉಪಕರಣಗಳು, ರೋಗಿಗಳ ದತ್ತಾಂಶಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದು, ತನಿಖೆಗಳ ಸಮಯದಲ್ಲಿ ಅಗತ್ಯವಾದ ಮಾಹಿತಿಗಳನ್ನು ಒದಗಿಸದ ಕಾರಣಗಳಿಗಾಗಿ ಕಾಲೇಜುಗಳಿಗೆ ದಂಡ ವಿಧಿಸಲಾಗಿದೆ. ಅವುಗಳಲ್ಲಿ 11 ಖಾಸಗಿ ವೈದ್ಯಕೀಯ ಕಾಲೇಜುಗಳೂ ಸೇರಿವೆ. ಚಿಕ್ಕಮಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮಂಡ್ಯ, ಯಾದಗಿರಿ, ಶಿವಮೊಗ್ಗ, ಕಾರವಾರ, ಮೈಸೂರು, ಕಲಬುರಗಿ, ಹುಬ್ಬಳ್ಳಿ, ಕೊಡಗು, ಚಾಮರಾಜ ನಗರ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ ಎರಡು ಇಎಸ್‌ಐ ಕಾಲೇಜುಗಳು ದಂಡನೆಗೆ ಒಳಗಾಗಿವೆ. ವಿಧಿಸಿದ ದಂಡದ ಮೊತ್ತ ₹3 ಲಕ್ಷದಿಂದ ₹15 ಲಕ್ಷದವರೆಗೆ ಇದೆ.

Advertisement

Advertisement
Next Article