For the best experience, open
https://m.bcsuddi.com
on your mobile browser.
Advertisement

ಮೂಲಂಗಿಯ ಆರೋಗ್ಯ ಪ್ರಯೋಜನಗಳು

09:13 AM Jul 07, 2024 IST | Bcsuddi
ಮೂಲಂಗಿಯ ಆರೋಗ್ಯ ಪ್ರಯೋಜನಗಳು
Advertisement

ಅರ್ಧ ಲೋಟ ಮೂಲಂಗಿ ರಸಕ್ಕೆ ಸಮಪ್ರಮಾಣದ ನೀರನ್ನು ಬೆರೆಸಿ ಒಂದು ಚಮಚ ನಿಂಬೆ ರಸ ಸೇರಿಸಿ ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತದಲ್ಲಿನ ಕೆಟ್ಟ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಅರ್ಧ ಲೋಟ ಮೂಲಂಗಿ ರಸಕ್ಕೆ ಸಮಪ್ರಮಾಣದ ನೀರನ್ನು ಬೆರೆಸಿ ಒಂದು ಚಮಚ ನಿಂಬೆ ರಸ ಸೇರಿಸಿ ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತದಲ್ಲಿನ ಕೆಟ್ಟ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಹೊಟ್ಟೆ ಉಬ್ಬರ, ಗ್ಯಾಸ್‌ ಹೆಚ್ಚಿದ್ದರೆ ಬಾರ್ಲಿಯನ್ನು ಬೇಯಿಸಿ ಅದಕ್ಕೆ ಮೂಲಂಗಿ ರಸ ಮತ್ತು ತುಪ್ಪ ಸೇರಿಸಿ ಸೇವಿಸಿದರೆ ಗ್ಯಾಸ್‌ ಬೇಗ ಶಮನವಾಗುತ್ತದೆ. ಸಮಯಕ್ಕೆ ಸರಿಯಾಗಿ ಮುಟ್ಟು ಆಗದಿದ್ದರೆ 1 ರಿಂದ 3 ಗ್ರಾಂನಷ್ಟು ಮೂಲಂಗಿ ಬೀಜದ ಪೇಸ್ಟ್‌ ಸೇವಿಸಿದರೆ ಮುಟ್ಟು ಸರಿಯಾದ ಸಮಯಕ್ಕೆ ಆಗುತ್ತದೆ. ಮೂಲಂಗಿ ರಸವನ್ನು ಮುಖಕ್ಕೆ ಲೇಪಿಸಿದರೆ ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ಸುಕ್ಕು ಕಡಿಮೆಯಾಗುತ್ತದೆ. ದೇಹದ ತೂಕ ಇಳಿಸಲು 1 ರಿಂದ 2 ದೊಡ್ಡ ಮೂಲಂಗಿಯ ಬೇರನ್ನು ಕತ್ತರಿಸಿ ನೀರಿನಲ್ಲಿ ಕುದಿಸಿಡಿ. 2 ಗಂಟೆ ನಂತರ ಸೋಸಿ ನೀರನ್ನು ಕುಡಿದರೆ ತೂಕ ಬೇಗ ಕಡಿಮೆಯಾಗುತ್ತದೆ. ಮೂತ್ರ ಮಾರ್ಗದಲ್ಲಿ ಕಲ್ಲಿದ್ದರೆ ಒಂದು ಗ್ರಾಂ ಮೂಲಂಗಿ ಬೀಜವನ್ನು ನಿಯಮಿತವಾಗಿ ಸೇವಿಸಿದರೆ ಕಲ್ಲುಗಳು ಕರಗಿ ಆಚೆ ಹೋಗುತ್ತವೆ. ತಾಜಾ ಮೂಲಂಗಿ ಎಲೆಗಳಿಂದ ರಸ ತೆಗೆದು ಊಟಕ್ಕೆ ಮುಂಚೆ ಸೇವಿಸಿದರೆ ಕಣ್ಣಿನ ಉರಿ, ಕಡಿತ, ನೀರು ಸೋರುವುದು ಇನ್ನಿತರ ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ. ಹಸಿ ಮೂಲಂಗಿಯನ್ನು ಪ್ರತಿದಿನ ಮಜ್ಜಿಗೆ ಜತೆ ಸೇವಿಸಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ.

Author Image

Advertisement