For the best experience, open
https://m.bcsuddi.com
on your mobile browser.
Advertisement

ಮುಡಾ ಹಗರಣ: 'ಸಿಎಂ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ‌ ಎಸಗಿದ್ದಾರೆ'- ಹೆಚ್ ಡಿಕೆ

03:57 PM Jul 13, 2024 IST | Bcsuddi
ಮುಡಾ ಹಗರಣ   ಸಿಎಂ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ‌ ಎಸಗಿದ್ದಾರೆ   ಹೆಚ್ ಡಿಕೆ
Advertisement

ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಅಕ್ರಮ‌ ಎಸಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮುಡಾ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ 14 ಮುಡಾ ಸೈಟ್‌ಗಳನ್ನ ಜಲದರ್ಶಿನಿ ಗೆಸ್ಟ್ ಹೌಸ್‌ನಲ್ಲಿ ಸಬ್ ರಿಜಿಸ್ಟರ್ ಕರೆದುಕೊಂಡು ಬಂದು ಒಂದೇ ದಿನದಲ್ಲಿ ಸಿದ್ದರಾಮಯ್ಯ ಪತ್ನಿ ಹೆಸರಿಗೆ ರಿಜಿಸ್ಟರ್ ಮಾಡಿಸಿದ್ದಾರೆ. ಸಿದ್ದರಾಮಯ್ಯ ಅವರು ಈಗ ತಮ್ಮ ಮೇಲೆ ಆರೋಪ ಬಂದಿರೋದಕ್ಕೆ ನಾನು ಹಿಂದುಳಿದ ವರ್ಗದವನು ನಾನು ಸಿಎಂ ಆಗಿದ್ದು ವಿಪಕ್ಷಗಳಿಗೆ ತಡೆಯೋಕೆ ಆಗದೇ ಆರೋಪಿಸುತ್ತಾ ಇದ್ದಾರೆ ಎಂದು ಹೇಳ್ತಾರೆ. ಹಿಂದುಳಿದವರಿಗೆ ಇವರು ಏನು ಮಾಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.

ಮುಡಾ ಕೇಸ್‌ನಲ್ಲಿ ಸಿಎಂಗೆ 62 ಕೋಟಿ ನೀಡಬೇಕಂತೆ. ಯಾರಪ್ಪನ ಆಸ್ತಿ ಅಂತಾ ಕೊಡಬೇಕು ಸಿಎಂ ಅವರೇ? ಆ ಜಮೀನು ಸಿದ್ದರಾಮಯ್ಯ ಪಿತ್ರಾರ್ಜಿತ ಆಸ್ತಿನಾ, ಸಿದ್ದರಾಮಯ್ಯ ಹೆಂಡತಿ ತಮ್ಮನ ಪಿತ್ರಾರ್ಜಿತ ಆಸ್ತಿನಾ? ಎಂದು ಪ್ರಶ್ನಿಸಿದರು.

Advertisement

ಇದು ಸಿಎಂ ಕುಟುಂಬದಲ್ಲಿ ನಡೆದಿರೋ ಹಗರಣ, ಇದರಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಈಗ ಕೇಸ್ ಮುಚ್ಚಿ ಹಾಕೋ ಪ್ರಯತ್ನ ಮಾಡ್ತಿದ್ದಾರೆ. ಎಷ್ಟೇ ದಾಖಲಾತಿ ಬಿಡುಗಡೆ ಮಾಡಿದ್ರು ಇವರು ಏನು ಮಾಡೊಲ್ಲ. ಹೀಗಾಗಿ ರಾಜ್ಯದ ಗೌರವಾನ್ವಿತ ಯಾರಾದರೂ ವಕೀಲರು ರಾಜ್ಯಪಾಲರಿಂದ ಸಿಎಂ ವಿರುದ್ಧ ತನಿಖೆಗೆ ಅನುಮತಿ ಪಡೆದು ಈ ಹಗರಣವನ್ನ ಕೋರ್ಟ್ ಮೂಲಕವೇ ಬಯಲಿಗೆ ಎಳೆಯಬೇಕು ಎಂದರು.

Author Image

Advertisement