For the best experience, open
https://m.bcsuddi.com
on your mobile browser.
Advertisement

'ಮುಡಾ ಹಗರಣ: ಎಷ್ಟೇ ದೊಡ್ಡವರಿದ್ದರೂ ಕೂಡ ಕ್ರಮ ಆಗಬೇಕು'- ಬಿ.ಕೆ ಹರಿಪ್ರಸಾದ್

03:49 PM Jul 09, 2024 IST | Bcsuddi
 ಮುಡಾ ಹಗರಣ  ಎಷ್ಟೇ ದೊಡ್ಡವರಿದ್ದರೂ ಕೂಡ ಕ್ರಮ ಆಗಬೇಕು   ಬಿ ಕೆ ಹರಿಪ್ರಸಾದ್
Advertisement

ಬೆಂಗಳೂರು: ಸಿಎಂ, ಡಿಸಿಎಂ ಬಹಳ ದೊಡ್ಡ ನಾಯಕರು ಅವರಿಗೆಲ್ಲ ಸಲಹೆ ನೀಡಲು ಆಗತ್ತಾ ನಾವು? ಮುಡಾ ಹಗರಣ, ವಾಲ್ಮೀಕಿ ಹಗರಣದಲ್ಲಿ ದನಿ ಎತ್ತಬೇಕು. ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮೆಲ್ಲರ ನಾಯಕ ರಾಹುಲ್ ಝೀರೋ ಟಾಲರೆನ್ಸ್ ಅಂತ ಹೇಳಿದ್ದಾರೆ. ಅದು ಯಾರೇ ಎಷ್ಟೇ ದೊಡ್ಡವರಿದ್ದರೂ ಕೂಡ ಕ್ರಮ ಆಗಬೇಕು ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಭೂಮಿ ವಿಚಾರದಲ್ಲಿ ಮಾತಾನಾಡುವುದಕ್ಕೆ ಹೋದರೆ ಫಂಡಾರಸ್ ಬಾಕ್ಸ್ ಇದ್ದ ಹಾಗೆ. ಯಾರೂ ಸಹ ಅದರಿಂದ ಹೊರಗೆ ಇಲ್ಲ. ಬಹುತೇಕ ರಾಜಕಾರಣಿಗಳು ಭೂಮಿ ವಿಚಾರದಿಂದ ಹೊರಗಿಲ್ಲ. ಒಂದಲ್ಲ ಒಂದು ರೀತಿ ಅದರೊಳಗೇ ಇದ್ದಾರೆ. ಅಷ್ಟು ಸುಲಭವಾಗಿ ಮುಡಾ ಅಂತ ಅದನ್ನು ಮುಚ್ಚಿ ಹಾಕಲು ಆಗುವುದಿಲ್ಲ. ಭೂಮಿ ಎನ್ನುವುದು ಕೂಲಂಕಷವಾಗಿ ನೋಡಿದ್ರೆ ಗೊತ್ತಾಗುತ್ತದೆ ಚರ್ಚೆಯೇ ಆಗುವುದಿಲ್ಲ ಎಂದು ತಿಳಿದಿದ್ದಾರೆ.

ಬಡವರಿಗೆ ಜಾಗ ಕೊಡುತ್ತೇವೆ ಅಂದರೆ ಚರ್ಚೆ ಆಗುತ್ತೆ, ಇಲ್ಲದಿದ್ದರೆ ಇಲ್ಲ. ಮೈಸೂರು ಮಾತ್ರವಲ್ಲ, ಬೆಂಗಳೂರಿನಲ್ಲಿ ಎಷ್ಟೆಲ್ಲ ಡಿನೋಟಿಫೈ ಆಗಿದೆ. ಯಾರ ಯಾರ ಕಾಲದಲ್ಲಿ ಎಷ್ಟೆಲ್ಲ ಡಿನೋಟಿಪೈ ಆಗಿದೆ ನೋಡಿ. ಬೆಂಗಳೂರು ಪ್ಯಾಲೇಸ್ ಗೆ ಜಾಗ ಕೊಡಲು ಎಷ್ಟು ವರ್ಷ ಆಗ್ತಿದೆ. ದೊಡ್ಡವರಿಗೆ ಒಂದು ಕಾನೂನು ಬಡವರಿಗೆ ಇನ್ನೊಂದು ಕಾನೂನು. ಎಲ್ಲರಿಗೂ ಒಂದೇ ಕಾನೂನು ಇರಬೇಕು. 135 ಸೀಟು ಬಂದಿದೆ ಅಂದ್ರೆ, ಅದಕ್ಕೆ ದುರ್ಬಲ ವರ್ಗದವರೇ ಕಾರಣ. ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಗೆ ಹೆಚ್ಚು ಮತ ಬಂದಿದೆ. ದುರ್ಬಲ ವರ್ಗದವರಿಗೆ ಅನ್ಯಾಯ ಆಗಬಾರದು ಎಂದು ಹೇಳಿದರು.

Advertisement

ವಾಲ್ಮೀಕಿ ನಿಗಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರದ್ದೇ ತಪ್ಪಿದ್ದರೂ ಕ್ರಮ ಆಗಬೇಕು. ಇದರಲ್ಲಿ ವಿರೋಧ ಪಕ್ಷಗಳು ವಿಫಲವಾದ್ರೂ ಸಹ ನಾವು ಬಿಡುವುದಿಲ್ಲ. ಸಮುದಾಯಕ್ಕೆ ಅನ್ಯಾಯ ಆಗಬಾರದು. ಸಾಕ್ಷಿ ಸಮೇತ ತಪ್ಪು ಹೊರ ಬಂದರೆ ನಾವೂ ಸಹ ಚರ್ಚೆ ಮಾಡಲು ತಯಾರಿದ್ದೇವೆ. ಸಾಕ್ಷಿ ಸಮೇತ ಹೊರ ಬರಬೇಕು. ವಾಲ್ಮೀಕಿ ಸಮುದಾಯ ಸೇರಿ ಯಾವುದೇ ದುರ್ಬಲ ವರ್ಗಕ್ಕೆ ಅನ್ಯಾಯ ಆಗಿದ್ರೆ ವಿರೋಧ ಪಕ್ಷದವರಿಗಿಂತ ಹೆಚ್ಚು ನಾವೇ ಧ್ವನಿ ಎತ್ತುತ್ತೇವೆ ಎಂದರು.

Author Image

Advertisement