ಮುಂಗಾರು ನಿಗದಿತ ಸಮಯಕ್ಕೆ ಕೇರಳಕ್ಕೆ ಆಗಮಿಸಲಿದೆ- ಹವಮಾನ ಇಲಾಖೆ
04:30 PM May 16, 2024 IST | Bcsuddi
Advertisement
ನವದೆಹಲಿ: ಈ ಬಾರಿ ನೈರುತ್ಯ ಮುಂಗಾರು ನಿಗದಿತ ಸಮಯಕ್ಕೆ ಕೇರಳಕ್ಕೆ ಆಗಮಿಸಲಿದೆ ಎಂದು ಭಾರತೀಯ ಹವಾಮಾನ
ಇಲಾಖೆ ನಿರ್ದೇಶಕ ಮೃತ್ಯುಂ ಜಯ್ ಮಹೋಪಾತ್ರ ಬುಧವಾರ ಹೇಳಿದ್ದಾರೆ.
ಮೇ 31ಕ್ಕೆ ಮುಂಗಾರು ಭಾರತ ಪ್ರವೇಶಿಸಲಿದ್ದು, ಈ ವರ್ಷ ಭಾರತದ ಕೃಷಿ ಚಟುವಟಿಕೆಗಳಿಗೆ ನೆರವಾಗಲಿದೆ ಎಂದು ಇಲಾಖೆ ಹೇಳಿದೆ. ಸಾಮಾನ್ಯವಾಗಿ ಜೂ.1ಮುಂಗಾರು ಭಾರತ ಪ್ರವೇಶಿಸುವ ದಿನವಾಗಿದೆ. ಆದರೆ ಈ ವರ್ಷ ನಿಗದಿತ ಸಮಯಕ್ಕೆ ಮಳೆ ಬೀಳಲಿದೆ ಎಂದು ಹವಮಾನ ಇಲಾಖೆ ಹೇಳಿದೆ.
ಈ ಭಾರಿ ಭಾರತದಲ್ಲಿ ಮುಂಗಾರಿನ ಪ್ರಭಾವದಿಂದ ಸಾಮಾನ್ಯಕ್ಕಿಂ ತ ಅಧಿಕ ಮಳೆಯಾಗಲಿದೆ. ಜೂನ್ ದ ಸೆಪ್ಟಂಬವರೆಗೆ ಮಳೆ ಅಧಿಕವಾಗಿ ಬರಲಿದೆ ಎಂದು ಇಲಾಖೆ ಈ ಹಿಂದೆ ಹೇಳಿತ್ತು. ಭಾರತದ ಕೃಷಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಗಮನಿಸಿದರೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬೀಳುವ ಮಳೆ ಅತ್ಯಂತ ಮಹತ್ವದಾಗಿದೆ.
Advertisement