ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮೀಮಿಗರ ಫೇವರೇಟ್‌ ಮೀಮ್‌ ಸ್ಟಾರ್‌ ʼಕಬೋಸ್ʼ ನಿಧನ

06:28 PM May 24, 2024 IST | Bcsuddi
Advertisement

ಜಪಾನಿನ ಜನಪ್ರಿಯ ನಾಯಿ ʼಕಬೋಸ್ʼ ಮೇ 24 ರಂದು ನಿಧನಗೊಂಡಿದೆ. ನಾಯಿಯ ಮಾಲಿಕ Atsuko Sato ಇಂದು ಬ್ಲಾಗ್ ಪೋಸ್ಟ್‌ನಲ್ಲಿ ಕಬೋಸು ಅವರ ಮರಣವನ್ನು ತಿಳಿಸಿದ್ದಾರೆ. ಡೋಗ್‌ ಮೀಮ್‌ ನಲ್ಲಿ ಈ ನಾಯಿಯ ಪೊಟೋವನ್ನು ಬಳಸಿಕೊಳ್ಳಲಾಗುತ್ತಿತ್ತು.2008 ರಲ್ಲಿ ಶಿಬಾ ಇನು ತಳಿಯ ಕಬೋಸುವನ್ನು ಅದರ ಮಾಲಿಕ ದತ್ತು ಪಡೆದಿದ್ದರು.2010 ರಿಂದ ಕಾಬೋಸ್‌ ಪೊಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. 2013 ರಲ್ಲಿ ಈ ನಾಯಿಯ ಪೊಟೋವನ್ನು ಕ್ರಿಪ್ಟೋಕರೆನ್ಸಿಯ ಲೋಗೋ ಆಗಿ ಬಳಸಲಾಗಿತ್ತು.ಆರಂಭದಲ್ಲಿ, ಇದು ಕೇವಲ ಜೋಕ್ ಕರೆನ್ಸಿಯಾಗಿತ್ತು, ನಂತರ ಇದು ನಾಯಿಗಳ ಆಧಾರದ ಮೇಲೆ ಇತರ ಕ್ರಿಪ್ಟೋಕರೆನ್ಸಿಗಳ ಅಭಿವೃದ್ಧಿಯನ್ನು ಉತ್ತೇಜಿಸಿತು.ಟೆಸ್ಲಾ ಸಿಇಒ ಎಲೋನ್ ಮಸ್ಕ್, ಕಳೆದ ವರ್ಷ ಟ್ವಿಟರ್ ಹಕ್ಕಿಯ ಲೋಗೋ ಪರವಾಗಿ ಲೋಗೋವನ್ನು ಕಬೋಸು ಚಿತ್ರಕ್ಕೆ ಬದಲಾಯಿಸಿದರು. ಅದು ಕ್ರಿಪ್ಟೋ ಬೆಲೆ ಗಗನಕ್ಕೇರಲು ಕಾರಣವಾಯಿತು.ತನಗರಿವಿಲ್ಲದೇ ಇಷ್ಟೊಂದು ಪ್ರಖ್ಯಾತಿ ಗಳಿಸಿದ್ದ ಕಬೋಸ್‌ ಶ್ವಾನ ಇದೀಗ ನಮ್ಮನ್ನ ಅಗಲಿದೆ ಎನ್ನುವುದು ಬೇಸರದ ಸಂಗತಿ.

Advertisement

Advertisement
Next Article