ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳ ರಫ್ತಿಗೆ ಭಾರತ ಬಂದರು ನಿರ್ಬಂಧ; ಡಿಜಿಎಫ್ ಟಿ ಅಧಿಸೂಚನೆ

05:14 PM Apr 16, 2024 IST | Bcsuddi
Advertisement

ನವದೆಹಲಿ: ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳ ರಫ್ತಿಗೆ ಭಾರತವು ಬಂದರು ನಿರ್ಬಂಧ ವಿಧಿಸಿದ್ದು, 4 ಕಸ್ಟಮ್ಸ್ ಸ್ಟೇಷನ್‌ಗಳ ಮೂಲಕ ಮಾತ್ರ ಅಗತ್ಯ ವಸ್ತುಗಳ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯದ (ಡಿಜಿಎಫ್ ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

Advertisement

ಮುಂಡ್ರಾ ಸೀ ಪೋರ್ಟ್, ಟ್ಯುಟಿಕೋರಿನ್ ಸೀ ಪೋರ್ಟ್, ನ್ಹವಾ ಶೇವಾ ಸೀ ಪೋರ್ಟ್ ಮತ್ತು ಐಸಿಡಿ ತುಘಲಕಾಬಾದ್ ಸ್ಟೇಷನ್‌ ಈ 4 ಕಸ್ಟಮ್ಸ್ ಸ್ಟೇಷನ್ ಗಳ ಮೂಲಕ ಅಗತ್ಯ ವಸ್ತುಗಳ ರಫ್ತಿಗೆ ಅನುಮತಿ ನೀಡಲಾಗಿದೆ.

ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆಯೂ ಮಾಲ್ಡೀವ್ಸ್‌ ಸರ್ಕಾರದ ಕೋರಿಕೆಯ ಮೇರೆಗೆ ಭಾರತವು ವಿಶಿಷ್ಟ ದ್ವಿಪಕ್ಷೀಯ ಕಾರ್ಯವಿಧಾನದ ಅಡಿಯಲ್ಲಿ 2024-25 ಕ್ಕೆ ನಿರ್ದಿಷ್ಟ ಪ್ರಮಾಣದ ಅಗತ್ಯ ಸರಕುಗಳನ್ನು ರಫ್ತು ಮಾಡಲು ಅನುಮತಿ ನೀಡಿದೆ.

Advertisement
Next Article