For the best experience, open
https://m.bcsuddi.com
on your mobile browser.
Advertisement

ಮಾನವನ ಮುಖ ಹೋಲುವ ವಿಶೇಷ ಕೀಟ ಪತ್ತೆ- ಎಲ್ಲಿ ಗೊತ್ತಾ?

03:36 PM Feb 08, 2024 IST | Bcsuddi
ಮಾನವನ ಮುಖ ಹೋಲುವ ವಿಶೇಷ ಕೀಟ ಪತ್ತೆ  ಎಲ್ಲಿ ಗೊತ್ತಾ
Advertisement

ಮಾನವನ ಮುಖವನ್ನೇ ಹೊಲುವ ವಿಶೇಷ ಕೀಟ ಉಡುಪಿಯ ಮಲ್ಪೆಯಲ್ಲಿ ಪತ್ತೆಯಾಗಿದೆ. ಮಲ್ಪೆಯ ಕೊಳ ಸಮೀಪದ ಯಶಸ್ವಿ ಮಂಜುಗಡ್ಡೆ ಸ್ಥಾವರದಲ್ಲಿ ಈ ಕೀಟ ಕಂಡು ಬಂದಿದೆ.

ಮಾನವನ ಮುಖವನ್ನು ಹೋಲುವ ಈ ಕೀಟ ನೋಡುಗರ ಗಮನ ಸೆಳೆದಿದೆ. ಸ್ಥಳೀಯರು ತಮ್ಮ ಮೊಬೈಲ್ ಗಳಲ್ಲಿ ಇದರ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ತಲೆಯಲ್ಲಿ ಟೋಪಿ ಧರಿಸಿದಂತೆ ಕಾಣುವ ಈ ಕೀಟ ಎರಡು ಕಣ್ಣು, ದೊಡ್ಡ ಮೂಗಿನ ಕೆಳಗೆ ಚಾರ್ಲಿ ಚಾಪ್ಲಿನ್ ಥರದ ಮೀಸೆ ಹೀಗೆ ದೂರದಿಂದ ನೋಡಿದರೆ ಮಾನವ ಮುಖದ ಕಲಾಕೃತಿಯಂತೆ ಕಾಣುತ್ತದೆ. ಕೆಂಪು, ಹಳದಿ, ಕಿತ್ತಳೆ, ಕಂದು ಬಣ್ಣದಲ್ಲಿರುವ ಈ ಕೀಟ ಬೆಳಗಿನ ಅವಧಿಯಲ್ಲಿ ಸೂರ್ಯನ ಬಿಸಿಲಿನ ಶಾಖ ಹಿರುತ್ತಾ ಗಿಡಗಳಲ್ಲಿ ಹೆಚ್ಚಾಗಿ ವಿಹರಿಸುತ್ತದೆ ಎನ್ನಲಾಗಿದೆ. ಸ್ಥಳೀಯವಾಗಿ ಇದನ್ನು ಹಿಟ್ಲರ್ ಕೀಟ ಎಂದು ಕರೆಯುತ್ತಾರೆ. ಫೆಬ್ರವರಿಯಿಂದ ಮೇ ತಿಂಗಳ ಅವಧಿಯಲ್ಲಿ ಇದು ಕಂಡುಬರುತ್ತದೆ ಎಂದು ತಜ್ಞರು ಹೇಳುತ್ತಾರೆ.

Advertisement
Author Image

Advertisement