For the best experience, open
https://m.bcsuddi.com
on your mobile browser.
Advertisement

ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ವಸ್ತುನಿಷ್ಠ, ವರದಿ ಮಾಡಲು ಸಲಹೆ; ಮುಖ್ಯಮಂತ್ರಿ ಸಿದ್ದರಾಮಯ್ಯ

07:22 AM Feb 04, 2024 IST | Bcsuddi
ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ವಸ್ತುನಿಷ್ಠ  ವರದಿ ಮಾಡಲು ಸಲಹೆ  ಮುಖ್ಯಮಂತ್ರಿ ಸಿದ್ದರಾಮಯ್ಯ
Advertisement

ದಾವಣಗೆರೆ: ಮಾಧ್ಯಮಗಳು ಸಮಾಜಕ್ಕೆ ಉಪಯೋಗವಾಗುವಂತಹ ವಸ್ತುನಿಷ್ಠ, ಸತ್ಯನಿಷ್ಠವಾಗಿರುವ ವಿಚಾರಗಳನ್ನು ಸಾಧ್ಯವಾದ ಮಟ್ಟಿಗೆ ಜನರಿಗೆ ತಿಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮಾಧ್ಯಮಗಳು ಯಾವುದೇ ಕಾರಣಕ್ಕೂ ಮೌಢ್ಯ, ಕಂದಾಚಾರ, ಕರ್ಮಸಿದ್ದಾಂತವನ್ನು ಪೆÇೀಷಿಸುವ ಕೆಲಸ ಮಾಡಬಾರದು. ಜನರಿಗೆ ಸತ್ಯ ಹೇಳಬೇಕು, ದನಿ ಇಲ್ಲದ ಜನರಿಗೆ ದನಿ ನೀಡುವ ಕೆಲಸ ಮಾಡಬೇಕು. ಪತ್ರಿಕೋದ್ಯಮದ ಬೆಳವಣಿಗೆಗೆ ತಂತ್ರಜ್ಞಾನ, ವಿಜ್ಞಾನ ಬೆಳವಣೆಗೆಯಾಗಿದೆ. ಆದರೂ ಪತ್ರಿಕೋದ್ಯಮ ಉದ್ದೇಶ ಸಫಲವಾಗಬೇಕಾದರೆ ಸುದ್ದಿಯು ಸತ್ಯನಿμÉ್ಠಯಿಂದ ಕೂಡಿರಬೇಕು. ನಾವು ಮಾಧ್ಯಮದಿಂದ ಸಮಾಜದಲ್ಲಿ ಯಾವ ಬದಲಾವಣೆ ನಿರೀಕ್ಷೆ ಮಾಡಿದ್ದೇವೆಯೋ ಆ ಬದಲಾವಣೆಗೆ ಯಾವುದೇ ಧಕ್ಕೆಯಾಗಬಾರದು ಎಂದು ಹೇಳಿದರು.

ಪತ್ರಿಕೋದ್ಯಮವನ್ನು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಪತ್ರಿಕೋದ್ಯಮ ಎಂದು ಎರಡು ಭಾಗವಾಗಿ ನೋಡಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಬಹಳ ಮುಖ್ಯವಾಗಿ ದೇಶಕ್ಕೆ ಸ್ವಾತಂತ್ರ್ಯ ಬೇಕು ಎಂದು ಮಾಧ್ಯಮಗಳಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿತ್ತು. ಸ್ವಾತಂತ್ರ್ಯ ಸಿಕ್ಕ ನಂತರ ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಕಾಯುವ, ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಯಾರ ಅಭಿವೃದ್ಧಿಯಾಗಬೇಕು ಎಂಬುವುದರ ಕುರಿತು ಇದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಜನರ ನಿರೀಕ್ಷೆಗಳು ಬಹಳಷ್ಟಿವೆ. ಜನರಿಗೆ ಪತ್ರಿಕೋದ್ಯಮದ ಮೂಲಕ ನ್ಯಾಯ ಸಿಗುತ್ತದೆ ಎಂಬ ಭಾವನೆಗಳಿವೆ. ನಮ್ಮ ಸಮಸ್ಯೆಗಳನ್ನು ಪ್ರಸಾರ ಮಾಡಿ, ನ್ಯಾಯ ಒದಗಿಸುತ್ತಾರೆಂದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಾರೆ. ಆ ಮೂಲಕ ಸರ್ಕಾರದಿಂದ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸವನ್ನು ಮಾಡುತ್ತವೆ ಎಂಬ ನಿರೀಕ್ಷೆಗಳು ಮಾಧ್ಯಮಗಳ ಮೇಲೆ ಜನರು ವಿಶ್ವಾಸವಿಟ್ಟುಕೊಂಡಿದ್ದಾರೆ. ಯಾವ ಕಾರಣಕ್ಕೂ ಜನರ ನಿರೀಕ್ಷೆ ಸುಳ್ಳಾಗಬಾರದು. ಅವರ ನಿರೀಕ್ಷೆಗೆ ತಕ್ಕಂತೆ ಮಾಧ್ಯಮ ಕಾರ್ಯನಿರ್ವಹಿಸಬೇಕು ಎಂದರು.

ನಮ್ಮಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಅಗಾಧವಾಗಿದೆ. ಬಡವರು, ಶ್ರೀಮಂತರ, ಮೇಲ್ವರ್ಗ, ಕೆಳವರ್ಗದವರು ಇದ್ದಾರೆ. ಬಸವಾದಿ ಶರಣರು ಸಮ ಸಮಾಜ ನಿರ್ಮಾಣ ಆಗಬೇಕು ಎಂದು ಹೇಳಿದ್ದರು. ಸಮಾಜದಲ್ಲಿ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸರ್ಕಾರ ಯಾವ ರೀತಿಯಾಗಿ ಹೋಗಬೇಕು ಎಂಬುದರ ಕುರಿತು ಸರ್ಕಾರವನ್ನು ಎಚ್ಚರಗೊಳಿಸುವ, ಸಲಹೆ ನೀಡುವ ರೂಪದಲ್ಲಿ ಮಾಧ್ಯಮ ಇದ್ದಾಗ ಮಾತ್ರ ಸಮಾಜದಲ್ಲಿ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇದಕ್ಕೆ ಪೂರಕವಾಗಿ ವಸ್ತುನಿಷ್ಟವಾಗಿ, ಸತ್ಯನಿಷ್ಠವಾಗಿ ಪತ್ರಿಕೆಗಳು ಕಾರ್ಯನಿರ್ವಹಿಸಿದರೆ ಮಾತ್ರ ಬದಲಾವಣೆ ತರಲು ಸಾಧ್ಯವಾಗಲಿದೆ ಎಂದರು.

Tags :
Author Image

Advertisement