For the best experience, open
https://m.bcsuddi.com
on your mobile browser.
Advertisement

ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಮಮ್ತಾಜ್ ಅಲಿ ನಾಪತ್ತೆ...!!

09:45 AM Oct 06, 2024 IST | BC Suddi
ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಮಮ್ತಾಜ್ ಅಲಿ ನಾಪತ್ತೆ
Advertisement
ಮಂಗಳೂರು: ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಮಮ್ತಾಜ್ ಅಲಿ ಅವರ ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಇಂದು ಕೂಳೂರು ಸೇತುವೆ ಮೇಲೆ ಪತ್ತೆಯಾಗಿದೆ.ಆದರೆ ಅವರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ರವಿವಾರ ಮುಂಜಾನೆ ಈ ಘಟನೆ ನಡೆದಿದೆ ಎನ್ನಲಾಗಿದೆ ‌ ಅಗ್ನಿಶಾಮಕ ಹಾಗೂ ಈಜು ತಜ್ಞರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಚುರುಕಿನ ತನಿಖೆ ಕೈಗೊಂಡಿದ್ದಾರೆ.
ಮಮ್ತಾಜ್ ಅಲಿ ಅವರು ತನ್ನ ಮಗಳಿಗೆ ವಾಟ್ಸಪ್ ಮೂಲಕ ಇನ್ನು ನಾನು ಹಿಂತಿರುಗಿ ಬರುವುದಿಲ್ಲ ಎಂಬ ಸಂದೇಶ ಕೂಡ ರವಾನಿಸಿದ್ದಾರೆ ಎಂದು ತಿಳಿಯಲಾಗಿದೆ. ಈ ವಿಷಯ ಆತಂಕಕ್ಕೆ ಕಾರಣವಾಗಿದೆ.
ಇವರು ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಯ ಚೇರ್ಮನ್ ಆಗಿದ್ದು, ಸ್ಥಳೀಯ ಜಮಾತ್ ನ ಪ್ರಮುಖರಾಗಿದ್ದಾರೆ. ಮಾಜಿ ಶಾಸಕ ಮೊಯಿದೀನ್ ಬಾವಾ ಹಾಗೂ ಕುಟುಂಬಸ್ಥರು ಸ್ಥಳದಲ್ಲಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Author Image

Advertisement