ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಹಿಳೆ ಕಿಡ್ನಾಪ್ ಪ್ರಕರಣ ರೇವಣ್ಣ ಗೆ ಸಂಬಂಧಿಸಿದ ಸ್ಥಳಗಳಲ್ಲಿ ಎಸ್ ಐಟಿ ದಾಳಿ

11:49 AM May 04, 2024 IST | Bcsuddi
Advertisement

ಬೆಂಗಳೂರು : ಕೆ ಆರ್ ನಗರ ಠಾಣೆಯಲ್ಲಿ ಹೆಚ್ ರೇವಣ್ಣ ಮೇಲೆ ದಾಖಲಾಗಿದ್ದ ಮಹಿಳೆ ಕಿಡ್ನಾಪ್ ಪ್ರಕರಣ ಹಿನ್ನೆಲೆ, ಮಹಿಳೆ ನಾಪತ್ತೆ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಎಚ್ ಡಿ ರೇವಣ್ಣರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು ಎನ್ನಲಾದ ಮಹಿಳೆ ಪತ್ತೆಗೆ ಎಸ್ಐಟಿ ವಿಶೇಷ ತನಿಖಾ ತಂಡ ಮಹಿಳೆ ಪತ್ತೆಗೆ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಮೈಸೂರು ಹಾಸನ , ಮಂಡ್ಯ ಜಿಲ್ಲೆ, ಬೆಂಗಳೂರು ನಗರ ಸೇರಿ ವಿವಿಧೆಡೆ ತಲಾಶ್ ನಡೆಸಿದೆ. ಎಚ್ ಡಿ ರೇವಣ್ಣ ಹೊಳೆನರಸೀಪುರ ಪಡುವಲಹಿಪ್ಪೆ ಬೆಂಗಳೂರು ನಿವಾಸಗಳು, ತೋಟದ ಮನೆಗಳು, ರೇವಣ್ಣ ಸಂಬಂಧಿಕರು ಹಾಗೂ ಸ್ನೇಹಿತರು ಮನೆಗಳು ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.ಎಲ್ಲಿಯೂ ಆ ಮಹಿಳೆ ಸುಳಿವು ಸಿಕ್ಕಿಲ್ಲ. ಸದ್ಯ ಎಸ್ ಐಟಿ ತನಿಖೆ ಮುಂದುವರಿಸಿದೆ.

Advertisement

Advertisement
Next Article