ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಹಿಳೆಯರಿಗೂ ತಿಂಗಳಿಗೆ 1,000 ರೂ ಧನಸಹಾಯ-ದೆಹಲಿ ಸರ್ಕಾರದ ಬಜೆಟ್‌ನಲ್ಲಿ ಘೋಷಣೆ

07:09 PM Mar 04, 2024 IST | Bcsuddi
Advertisement

ನವದೆಹಲಿ: ದೆಹಲಿ ಸರ್ಕಾರ ಹಣಕಾಸು ಸಚಿವೆ ಆತಿಶಿ ಅವರು ಇಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. 76,000 ಕೋಟಿ ರೂ ಗಾತ್ರದ ಬಜೆಟ್​ನಲ್ಲಿ ಶೇ. 21ಕ್ಕೂ ಹೆಚ್ಚು ಹಣವನ್ನು ಶಿಕ್ಷಣಕ್ಕೆ ನೀಡಲಾಗಿದೆ.ಇನ್ನು ಬಜೆಟ್​ನಲ್ಲಿ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯನ್ನು ಘೋಷಿಸಲಾಗಿದೆ.

Advertisement

ಈ ಯೋಜನೆಯಲ್ಲಿ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲಾ ಮಹಿಳೆಯರಿಗೂ ತಿಂಗಳಿಗೆ 1,000 ರೂ ನೀಡಲಾಗುತ್ತದೆ. ಏಪ್ರಿಲ್ 1ರಿಂದ ಇದು ಜಾರಿಯಾಗಲಿದೆ. ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಈ ಕೊಡುಗೆ ಸಿಗುತ್ತದೆ ಎಂದು ಆತಿಶಿ ತಮ್ಮ ಬಜೆಟ್​ನಲ್ಲಿ ತಿಳಿಸಿದ್ದಾರೆ.

ಹಣಕಾಸು ಸಚಿವೆ ಆತಿಶಿ ತಮ್ಮ 76,000 ಕೋಟಿ ರೂ ದಾಖಲೆಯ ಬಜೆಟ್​ನಲ್ಲಿ 16,396 ಕೋಟಿ ರೂ.ವನ್ನು ಶಿಕ್ಷಣ ವಲಯಕ್ಕೆ ಕೊಟ್ಟಿದ್ದಾರೆ. 8,685 ಕೋಟಿ ರೂ ಅನ್ನು ಆರೋಗ್ಯ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಕೇಜ್ರಿವಾಲ್ ಸರ್ಕಾರದ ಟ್ರೇಡ್ಮಾರ್ಕ್ ಎನಿಸಿರುವ ಮೊಹಲ್ಲಾ ಕ್ಲಿನಿಕ್​ಗಳಿಗೆ 212 ಕೋಟಿ ರೂ ಕೊಡಲಾಗಿದೆ.

ಮಹಿಳೆಯರಿಗೆ ಮಾಸಿಕ 1,000 ರೂ ನೀಡುವುದು ಈ ಬಾರಿಯ ಬಜೆಟ್​ನ ಮುಖ್ಯ ಅಂಶವಾಗಿದೆ. ಹಾಗೆಯೇ, ವಿದ್ಯುತ್ ಬಿಲ್ ಸಬ್ಸಿಡಿ ಮುಂದುವರಿಯುತ್ತಿದೆ ಎಂದು ಹೇಳಿದರು.

 

 

Advertisement
Next Article