ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಸೀದಿ ಬೋರ್ಡ್ ತೆರವುಗೊಳಿಸಿ, 'ಜ್ಞಾನವಾಪಿ ಮಂದಿರ'ವೆಂದು ಮರುನಾಮಕರಣ

05:44 PM Feb 01, 2024 IST | Bcsuddi
Advertisement

ಕಾಶಿ: ಜ್ಞಾನವಾಪಿ ಪ್ರಕರಣದಲ್ಲಿ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜಿಸುವ ಹಕ್ಕನ್ನು ನೀಡುವಂತೆ ವಾರಣಾಸಿ ಕೋರ್ಟ್ ಆದೇಶಿದ ಬೆನ್ನಲ್ಲೇ ಬುಧವಾರ ತಡ ರಾತ್ರಿ ಇಲ್ಲಿನ ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.

Advertisement

ಇದೀಗ ವಿವಾದಿತ 'ಜ್ಞಾನವಾಪಿ ಮಸೀದಿ' ಗೆ 'ಜ್ಞಾನವಾಪಿ ಮಂದಿರ' ಎಂದು ಮರುನಾಮಕರಣ ಮಾಡಲಾಗಿದ್ದು, ಅಲ್ಲಿದ್ದ ಹಳೆಯ ಬೋರ್ಡ್ ನ್ನು ತೆರವುಗೊಳಿಸಲಾಗಿದೆ.

ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಮಸೀದಿಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಹಿಂದೂಗಳಿಗೆ ದೊಡ್ಡ ಜಯ ಸಿಕ್ಕಿದ್ದು, ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿರುವ ವಿಗ್ರಹಗಳಿಗೆ ಅರ್ಚಕರು ಪೂಜೆ ಸಲ್ಲಿಸಬಹುದು ಎಂದು ಜಿಲ್ಲಾ ನ್ಯಾಯಾಲಯ ಬುಧವಾರ ತೀರ್ಪು ನೀಡಿತ್ತು.

ಹೀಗಾಗಿ 31 ವರ್ಷಗಳ ನಂತರ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪೂಜೆ ನಡೆದಿದೆ. ಇನ್ನೊಂದೆಡೆ ಮಸೀದಿ ಎಂದಿದ್ದ ಬೋರ್ಡ್ ಬದಲಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Advertisement
Next Article