ಮಸಾಲಾ ಸೀಗಡಿ ಫ್ರೈ ಮಾಡುವ ವಿಧಾನ
ಸೀಗಡಿ ಎಂದರೆ ಕೆಲವರಿಗೆ ತುಂಬಾ ಇಷ್ಟ. ಇದನ್ನು ಬಳಸಿ ಮಾಡುವ ಆಹಾರ ಕೂಡ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಮಸಾಲಾ ಸೀಗಡಿ ಫ್ರೈ ಮಾಡುವ ವಿಧಾನ ಇದೆ. ಮಾಂಸಹಾರ ಪ್ರಿಯರಿಗೆ ಇದು ಇಷ್ಟವಾಗುತ್ತೆ.
ಬೇಕಾಗುವ ಸಾಮಗ್ರಿಗಳು : ಸೀಗಡಿ 250 ರಿಂದ 300 ಗ್ರಾಂ, 1 – ಟೀ ಸ್ಪೂನ್ ಅಚ್ಚ ಖಾರದ ಪುಡಿ, 1/4 – ಟೀ ಸ್ಪೂನ್ ಅರಿಶಿನ, 1 – ಟೀ ಸ್ಪೂನ್ ಶುಂಠಿ – ಬೆಳ್ಳುಳ್ಳಿ ಪೇಸ್ಟ್, 1 – ಟೀ ಸ್ಪೂನ್ ಧನಿಯಾ ಪೌಡರ್, 1/2 – ಟೀ ಸ್ಪೂನ್ ಜೀರಿಗೆ, ಪೌಡರ್, 1/2 – ಟೀ ಸ್ಪೂನ್ ಗರಂ ಮಸಾಲಾ ಪೌಡರ್, 2 – ಈರುಳ್ಳಿ, 4 – ಹಸಿಮೆಣಸಿನಕಾಯಿ, 15-20 – ಕರಿಬೇವು ಎಲೆ, 1 ½ ಟೀ ಸ್ಪೂನ್ ಲಿಂಬೆ ರಸ, 3 – ಟೀ ಸ್ಪೂನ್ ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಸೀಗಡಿಯನ್ನು ಚೆನ್ನಾಗಿ ಬಿಡಿಸಿಕೊಂಡು ಬೌಲ್ ಗೆ ಹಾಕಿಕೊಳ್ಳಿ. ಅದಕ್ಕೆ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಅಚ್ಚಖಾರದ ಪುಡಿ, ಅರಿಶಿನ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚುಳ ಮುಚ್ಚಿ 30 ನಿಮಿಷ ಎತ್ತಿಟ್ಟುಕೊಳ್ಳಿ. ಗ್ಯಾಸ್ ಆನ್ ಮಾಡಿ ಪ್ಯಾನ್ ಇಟ್ಟುಕೊಳ್ಳಿ. ಪ್ಯಾನ್ ಬಿಸಿ ಆಗುತ್ತಿದ್ದಂತೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಕತ್ತರಿಸಿ ಕೊಂಡಿರುವ ಈರುಳ್ಳಿ ಹಾಕಿ ಗೋಲ್ಡನ್ ಕಲರ್ ಬರುವವರೆಗೂ ಫ್ರೈ ಮಾಡಬೇಕು ತದನಂತರ ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವು, ಹಾಕಿ 2 ನಿಮಿಷ ಬಾಡಿಸಿಕೊಂಡು ನಂತರ ಮಸಾಲೆಯಲ್ಲಿ ಮಿಕ್ಸ್ ಮಾಡಿರುವ ಸೀಗಡಿ ಯನ್ನು ಹಾಕಿ ಮೂರರಿಂದ ಐದು ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಬೇಕು ನಂತರ ಧನಿಯಾ ಪೌಡರ್ ಜೀರಿಗೆ ಪೌಡರ್ ಹಾಕಿ ಮೂರರಿಂದ ನಾಲ್ಕು ನಿಮಿಷ ಬೇಯಿಸಿದ ನಂತರ ಲಿಂಬೆ ರಸ ಮಿಕ್ಸ್ ಮಾಡಿದರೆ. ಮಸಾಲಾ ಸಿಗಡಿ ಫ್ರೈ ರೆಡಿ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.