For the best experience, open
https://m.bcsuddi.com
on your mobile browser.
Advertisement

ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರಗಳನ್ನು ಸೇವಿಸಿ

09:02 AM May 13, 2024 IST | Bcsuddi
ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರಗಳನ್ನು ಸೇವಿಸಿ
Advertisement

ಬಿರುಬಿಸಿಲಿನ ಬಳಿಕ ಮಳೆಗಾಲ ಪ್ರಾರಂಭವಾಗುತ್ತಿದೆ. ಜೂನ್ ತಿಂಗಳಲ್ಲಿ ಮುಂಗಾರು ಪ್ರಾರಂಭವಾಗುವ ಜೊತೆಗೆ ಇಡೀ ವಾತಾವರಣವೇ ಬದಲಾಗಲಿದೆ. ಇದು ಆರೋಗ್ಯದ ಬದಲಾವಣೆಯ ಮೇಲೂ ಪರಿಣಾಮ ಬೀರಲಿದೆ. ಮಳೆಗಾಲದಲ್ಲಿ ಬಿಸಿಲು ಕಡಿಮೆ ಇರುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಾಗುವುದರಲ್ಲಿ ಅನುಮಾನವಿಲ್ಲ. ಈ ಕಾಲದಲ್ಲಿ ಆಹಾರ ಪದ್ಧತಿ ಮೇಲೂ ಸಾಕಷ್ಟು ನಿಗಾ ಹೊಂದಿರಬೇಕು, ಮಳೆಗಾಲಕ್ಕೆ ಹೊಂದಿಕೆಯಾಗುವ ಆಹಾರವನ್ನು ಸೇವಿಸಬೇಕು.

ಈ ಬಗ್ಗೆ ವೈದ್ಯರ ಒಂದಷ್ಟು ಸಲಹೆ ಇಲ್ಲಿದೆ. ಹಾಲಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ ಮತ್ತು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಳೆಗಾಲದಲ್ಲಿ ಮಿತವಾಗಿ ಹಾಲು ಸೇವನೆ ಮಾಡಬೇಕು. ಹಾಲಿನಲ್ಲಿ ಕೀಟಾಣು ಮತ್ತು ಬ್ಯಾಕ್ಟೀರಿಯಾಗಳು ಹೆಚ್ಚಾಗಿರುವ ಕಾರಣ ಇದು ಸೋಂಕು ಹರಡಬಹುದು. ಇದರ ಬದಲಿಗೆ ಮೊಸರನ್ನು ಆಯ್ಕೆ ಮಾಡಿ. ಮಳೆಗಾಲದಲ್ಲಿ ಸೀಸನಲ್ ಹಣ್ಣುಗಳನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಪೀಚ್, ಪ್ಲಮ್, ಚೆರ್ರಿ, ದಾಳಿಂಬೆಯಂತಹ ಸೀಸನಲ್ ಹಣ್ಣುಗಳು ವಿಟಮಿನ್ ಎ ಮತ್ತು ಸಿ ಮತ್ತು ಫೈಬರ್, ಆಂಟಿ ಆಕ್ಸಿಡೆಂಟ್‌ಗಳನ್ನು ಅಧಿಕವಾಗಿ ಹೊಂದಿವೆ.

ಇ. ಈ ಹಣ್ಣುಗಳ ತಾಜಾ ಜ್ಯೂಸ್‌ನನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಒಳ್ಳೆಯದು. ಟೀ ಮಳೆಗಾಲದಲ್ಲಿ ತುಂಬಾ ಉಲ್ಲಾಸ ನೀಡುವುದು. ಆದರೆ ಗಿಡಮೂಲಿಕೆ ಚಹಾ ಕುಡಿದರೆ ಅದು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು ಮತ್ತು ಸೋಂಕುಗಳಾಗಿರುವಂತಹ ಜ್ವರ, ಶೀತ ಮತ್ತು ತಲೆನೋವನ್ನು ದೂರವಿಡುವುದು.ತುಳಸಿ ಎಲೆಗಳು, ದಾಲ್ಚಿನಿ, ಏಲಕ್ಕಿ, ಶುಂಠಿ, ಸೋಂಪು ಇತ್ಯಾದಿಗಳನ್ನು ಚಾದಲ್ಲಿ ಬಳಸಿ. ಕಾಫಿ, ಚಾ ಮತ್ತು ತಂಪು ಪಾನೀಯಗಳ ಬದಲಿಗೆ ಗಿಡಮೂಲಿಕೆ ಚಾ ಗಳನ್ನು ಬಳಸಿ. ಮಳೆಗಾಲದಲ್ಲಿ ಚಳಿ ಸಹ ಹೆಚ್ಚಿರುತ್ತದೆ, ಈ ವೇಳೆ ದೇಹ ಬೆಚ್ಚಗಿನ ಆಹಾರವನ್ನು ಬಯಸುತ್ತಿರುತ್ತದೆ.

Advertisement

ಹೀಗಾಗಿ, ಬಜ್ಜಿ, ಬೋಂಡಾದಂಥ ಎಣ್ಣೆಯುಕ್ತ ಪದಾರ್ಥ ತಿನ್ನುವ ಬದಲು ಸೂಪ್, ಮಸಾಲಾ ಚಹಾ, ಹಸಿರು ಚಹಾ, ರಸಂ, ದಾಲ್ ಅಥವಾ ಕಷಾಯಗಳು ಈ ಕಾಲದಲ್ಲಿ ಹೆಚ್ಚು ಹೊಂದುಕೊಳ್ಳುತ್ತವೆ. ಇದು ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ಶೀತ, ಶ್ವಾಸಕೋಶದ ಸಮಸ್ಯೆ ಕಡಿಮೆಯಾಗುವ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಸೋರೆಕಾಯಿ ಸೀಸನ್ ಆಗಿರುವುದರಿಂದ ಸೋರೆಕಾಯಿಯಲ್ಲಿ ತಯಾರಾದ ಆಹಾರಗಳನ್ನು ಸೇವಿಸುವುದು ಉತ್ತಮ. ಇನ್ನು, ಕುಂಬಳಕಾಯಿಗಳು, ಸೀಬೆಕಾಯಿಗಳು ಇತ್ಯಾದಿಗಳನ್ನು ಬಳಸಿ. ಹಸಿ ತರಕಾರಿಗಳು ಸಕ್ರಿಯ ಬ್ಯಾಕ್ಟಿರಿಯಾ ಮತ್ತು ಅನಾರೋಗ್ಯಕ್ಕೆ ಕಾರಣವಾಗುವ ವೈರಸ್‌ಗಳನ್ನು ಒಳಗೊಂಡಿರುವುದರಿಂದ, ಬದಲಿಗೆ ಬೇಯಿಸಿದ ಸಲಾಡ್‌ಗಳನ್ನು ಆರಿಸಿಕೊಳ್ಳಿ. ಹಸಿರು ಮೆಣಸಿನಕಾಳು: ಮಳೆಗಾಲದಲ್ಲಿ ಹಸಿರು ಮೆಣಸಿನಕಾಳು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. ಇದರಲ್ಲಿ ಪೈಪರಿನ್ ಎಂಬ ಆಲ್ಕಲಾಯ್ಡ್ ಇದ್ದು, ಇದು ಹೆಚ್ಚಿನ ಮಟ್ಟದ ವಿಟಮಿನ್ ಸಿ ಮತ್ತು ಕೆ ಅನ್ನು ಒಳಗೊಂಡಿರುವುದರಿಂದ ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜೊತೆಗೆ ಅಜೀರ್ಣ, ಗ್ಯಾಸ್ಟಿಕ್‌ನಂಥ ಸಮಸ್ಯೆಗಳನ್ನು ನಿವಾರಿಸಲಿದೆ.

ಶುಂಠಿ ಮತ್ತು ಬೆಳ್ಳುಳ್ಳಿ: ಉರಿಯೂತ ನಿವಾರಕ, ಬ್ಯಾಕ್ಟಿರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳ ಹೊರತಾಗಿ, ಶುಂಠಿ ಮತ್ತು ಬೆಳ್ಳುಳ್ಳಿ ಆಂಟಿವೈರಲ್ ಗುಣಗಳನ್ನು ಹೊಂದಿದ್ದು ಅದು ಶೀತ ಮತ್ತು ಜ್ವರವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಶುಂಠಿ ಚಹಾವು ಗಂಟಲಿನ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ, ಆದರೆ ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ, ಪುಡಿಮಾಡಿದ ಶುಂಠಿ ಅಥವಾ ಅದರ ಸಾರವನ್ನು ಜೇನುತುಪ್ಪದೊಂದಿಗೆ ಬೆರೆಸಬಹುದು. ಆಂಟಿಮೈಕ್ರೋಬಿಯಲ್/ಆಂಟಿಫಂಗಲ್ ಪರಿಣಾಮಗಳೊಂದಿಗೆ ಪ್ರಬಲವಾದ ಪ್ರತಿರಕ್ಷಣಾ ಉತ್ತೇಜಕವಾಗಿರುವ ಬೆಳ್ಳುಳ್ಳಿಯನ್ನು ಗ್ರೇವಿಗಳು, ಚಟ್ಟಿಗಳು, ಸೂಪ್‌ಗಳು, ಚಹಾ ಮತ್ತು ಇತರ ಭಕ್ಷ್ಯಗಳಲ್ಲಿ ಬಳಸಬಹುದು. ಡ್ರೈ ಫ್ರುಟ್ಸ್: ಯಾವುದೇ ಋತುವಿನಲ್ಲಿ, ಖರ್ಜೂರ, ಬಾದಾಮಿ, ವಾಲ್‌ನಟ್ಸ್ ಮತ್ತು ಗೋಡಂಬಿಗಳನ್ನು ತಿನ್ನುವುದು ಪ್ರಯೋಜನಕಾರಿಯೆ. ಡ್ರೈ ಫ್ರಟ್ಸ್ ನಿಮ್ಮನ್ನು ಆರೋಗ್ಯವಾಗಿಡುವ ಜೊತೆಗೆ ಜಂಕ್‌ಫುಡ್ ತಿನ್ನುವುದನ್ನು ತಪ್ಪಿಸಲಿದೆ.

Author Image

Advertisement