For the best experience, open
https://m.bcsuddi.com
on your mobile browser.
Advertisement

ಮಲಯಾಳಂ ನಟಿ ಲಕ್ಷ್ಮಿಕಾ ಸಜೀವನ್ ಹೃದಯಾಘಾತದಿಂದ 24 ನೇ ವಯಸ್ಸಿನಲ್ಲಿ ನಿಧನ

04:03 PM Dec 09, 2023 IST | Bcsuddi
ಮಲಯಾಳಂ ನಟಿ ಲಕ್ಷ್ಮಿಕಾ ಸಜೀವನ್ ಹೃದಯಾಘಾತದಿಂದ 24 ನೇ ವಯಸ್ಸಿನಲ್ಲಿ ನಿಧನ
Advertisement

ಕೊಚ್ಚಿ: ಮಾಲಿವುಡ್ ಸಿನಿರಂಗದ ಖ್ಯಾತ ನಟಿ ಲಕ್ಷ್ಮಿಕಾ ಸಜೀವನ್ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದು, ಮಾಲಿವುಡ್ ರಂಗಕ್ಕೆ ದೊಡ್ಡ ಆಘಾತ ಉಂಟಾಗಿದೆ.

ಲಕ್ಷ್ಮಿಕಾ ಸಜೀವನ್ (24) ಯುನೈಟೆಡ್ ಅರಬ್ ಎಮಿರೇಟ್ಸ್ನ ಶಾರ್ಜಾದಲ್ಲಿ ಡಿ.8 ಶುಕ್ರವಾರ  ದಂದು  ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಶಾರ್ಜಾದಲ್ಲಿ ಬ್ಯಾಂಕ್ ನಲ್ಲಿರುವಾಗ ಅವರಿಗೆ ಹಠಾತ್ ಹೃದಯಾಘಾತವಾಗಿದೆ.
ತಿಳಿಸಿದೆ.

ಲಕ್ಷ್ಮೀಕಾ ಮಾಲಿವುಡ್ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಅವರು, ಕಾಕ್ಕ ಎನ್ನುವ ಕಿರುಚಿತ್ರದಲ್ಲಿ ಪಂಚಮಿಯ ಪಾತ್ರವನ್ನು ಮಾಡಿ ಗಮನ ಸೆಳೆದರು. ಅಲ್ಲದೇ ಕಿರುಚಿತ್ರದಲ್ಲಿನ ಅವರ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.ಇದಾದ ಬಳಿಕ ಅವರು ಮಾಲಿವುಡ್ ನಲ್ಲಿ ಅನೇಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮುಖ್ಯವಾಗಿ ಪೂಜ್ಯಮ್ಮ ಪಂಚವರ್ಣತಥಾ, ಸೌದಿ ವೆಲ್ಲಕ್ಕ, ಉಯರೆ, ಒರು ಕುಟ್ಟನಾಡನ್ ಬ್ಲಾಗ್, ಒರು ಯಮಂದನ್ ಪ್ರೇ ಮಕಥಾ, ನಿತ್ಯಹರಿ ಸೇರಿದಂತೆ ಹಲವು ಸಿನಿಮಾದಲ್ಲಿ ಅವರು ನಟಿಸಿದ್ದರು.

Advertisement

2021 ರಲ್ಲಿ ತೆರೆಕಂಡ ʼಕೂನ್ʼ ಸಿನಿಮಾದಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದ, ಪೂಜ್ಯಮ್ಮ ಚಿತ್ರದಲ್ಲಿ ದೇವಯಾನಿ ಎನ್ನುವ ಶಿಕ್ಷಕಿಯ ಪಾತ್ರಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Author Image

Advertisement