ಮರಕ್ಕೆ ಗುದ್ದಿದ ಗಾಡಿ : ಮಗು ಸೇರಿ ಒಂದೇ ಕುಟುಂಬದ ಐವರು ಸಾವು
02:50 PM Oct 31, 2023 IST | Bcsuddi
Advertisement
ಉತ್ತರ ಪ್ರದೇಶದ ಹರ್ದೋಯಿನಲ್ಲಿ ಮರವೊಂದಕ್ಕೆ ವಾಹನ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಸೋಮವಾರ ನಿನ್ನೆ ಸಂಜೆ ಬಿಲ್ಹುರ್-ಕತ್ರಾ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ. ರಸ್ತೆ ಅಪಘಾತದಲ್ಲಿ ನಾಲ್ವರು ವಯಸ್ಕರು ಹಾಗೂ ನಾಲ್ಕು ವರ್ಷದ ಒಂದು ಮಗು ಮೃತಪಟ್ಟಿದೆ. ಇವರು ನಯಾಗಾಂವ್ನ ಬರಕನಾಥ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಹರ್ದೋಯಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದುರ್ಗೇಶ್ ಕುಮಾರ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.