ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮನೆಯಿಂದಲೇ ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣ ಪತ್ರ ಪಡೆಯಬಹುದು.!

05:18 PM Oct 25, 2024 IST | BC Suddi
Advertisement

 

Advertisement

ದಾವಣಗೆರೆ: ಭಾರತೀಯ ಅಂಚೆ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‍ಗಳ ಮೂಲಕ ಮನೆ ಬಾಗಿಲಿನಲ್ಲೇ ಪಿಂಚಣಿದಾರರು ಸುಲಭವಾಗಿ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಪಿಂಚಣಿದಾರರು ಅಥವಾ ಕುಟುಂಬದ ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಪೋಸ್ಟ್ ಮ್ಯಾನ್ ಮೂಲಕ ರೂ.70 ಶುಲ್ಕ ನೀಡುವುದರೊಂದಿಗೆ ಕೆಲವೇ ನಿಮಿಷಗಳಲ್ಲಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬೆರಳಚ್ಚು ಪರಿಶೀಲಿಸಿ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ನ.30 ರೊಳಗಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್  www.ippbonline.com     ಮತ್ತು   marketing@ippbonline.in       ಸಂಪರ್ಕಿಸಲು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

Tags :
ಮನೆಯಿಂದಲೇ ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣ ಪತ್ರ ಪಡೆಯಬಹುದು.!
Advertisement
Next Article