ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮನುಷ್ಯರು, ಮನುಷ್ಯರನ್ನು ಪ್ರೀತಿಸುವಂತಾಗಬೇಕು: . ಮುಖ್ಯಮಂತ್ರಿ ಸಿದ್ದರಾಮಯ್ಯ

07:19 AM Feb 04, 2024 IST | Bcsuddi
Advertisement

 

Advertisement

ದಾವಣಗೆರೆ: ಜೀವಕ್ಕೆ ಯಾವ ಕುಲವಿದೆ, ನಮ್ಮ ಶರೀರದಲ್ಲಿನ ರಕ್ತಕ್ಕೆ ಯಾವ ಜಾತಿಯ ಲೇಪನವೂ ಇಲ್ಲ, ತುರ್ತು ಸಂದರ್ಭದಲ್ಲಿ ಬದುಕಲು ಯಾರ ರಕ್ತವನ್ನಾದರೂ ಪಡೆದು ನಮ್ಮ ಜೀವ ಉಳಿಸಿಕೊಳ್ಳುತ್ತೇವೆ ಈ ನಿಟ್ಟಿನಲ್ಲಿ ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕೆಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹೇಳಿದರು.

ಅವರು ಶನಿವಾರ ಹೊನ್ನಾಳಿ ಪಟ್ಟಣದಲ್ಲಿ ಸ್ಥಳೀಯ ಕುರುಬ ಸಮಾಜದಿಂದ ಟಿ.ಬಿ.ವೃತ್ತದ ಬಳಿ ನಿರ್ಮಾಣ ಮಾಡಲಾದ ಕನಕದಾಸರ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿ ಸಮಾರಂಭದಲ್ಲಿ ಮಾತನಾಡಿದರು. ಕುರುಬ ಸಮಾಜ ಹಾಗೂ ಇತರೆ ಎಲ್ಲರೂ ಸೇರಿ ಕನಕದಾಸರ ಪ್ರತಿಮೆ ಸ್ಥಾಪಿಸುವ ಕಾರ್ಯ ಮಾಡಿದ್ದಾರೆ. ದಾಸಶ್ರೇಷ್ಟ ಕನಕದಾಸರ ಪ್ರತಿಮೆ ಲೋಕಾರ್ಪಣೆ ಮಾಡಿದ್ದೇನೆ ಎಂದರು.

ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದರು, ಆದರೆ ಕುರುಬರಾಗಿ ಉಳಿದಿರಲಿಲ್ಲ, ವಿಶ್ವಮಾನವರಾಗಿದ್ದರು. ಆದರೆ ನಾವುಗಳು ಹುಟ್ಟಿದಾಗ ವಿಶ್ವಮಾನವರಾಗುತ್ತೇವೆ, ಕೊನೆಯಲ್ಲಿ ಅಲ್ಪಮಾನವರು. ಆದರೆ ಬುದ್ದ, ಬಸವ, ಕನಕ, ಅಂಬೇಡ್ಕರ್, ಗಾಂಧೀಜಿ ಇವರೆಲ್ಲಾ ಜನರಿಗೆ ನೀಡಿದ ಸಂದೇಶ ವಿಶ್ವ ಮಾನವರಾಗಲು, ನಾವೆಲ್ಲರೂ ಮನುಷ್ಯರಾಗಲು ಪ್ರಯತ್ನ ಮಾಡಿ ದ್ವೇಷಿಸದೇ, ಪರಸ್ಪರ ಪ್ರೀತಿಸೋಣ ಎಂದರು.

ಬಸವಾದಿ ಶರಣರು, ಕನಕದಾಸರು ಹೇಳಿದ್ದು ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣದ ತತ್ವವನ್ನು ಸಾರಿದರು. ಇದನ್ನು ಅರಿಯಲು ವಚನಗಳು ಮತ್ತು ಕೀರ್ತನೆಗಳನ್ನು ಓದಲು ಮುಂದಾಗಬೇಕು.

ಕನಕದಾಸರ ಪ್ರಮುಖ ಕಾವ್ಯ ಕೃತಿಗಳಾದ ಮೋಹನತರಂಗಿಣಿ,  ನಳಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ ಇವುಗಳನ್ನು ಜನರು ಓದಬೇಕು. ರಾಮಧಾನ್ಯ ಭಾಮಿನಿ ಷಟ್ಪದಿಯಲ್ಲಿದ್ದು ಕಾಯಕ ದಾಸೋಹದ ಉಲ್ಲೇಖ ಇದರಲ್ಲಿ ಸಿಗುತ್ತದೆ. ಅಕ್ಕಿ ಮತ್ತು ರಾಗಿಯಲ್ಲಿ ಯಾವುದು ಹೆಚ್ಚು ಮಹತ್ವತೆಯನ್ನು ಹೊಂದಿದೆ ಎಂದು ಇದರ ಸಾರಾಂಶವಾಗಿದ್ದು ರಾಗಿಯ ಮಹತ್ವತೆಯ ಬಗ್ಗೆ ಸಂಪೂರ್ಣ ಉಲ್ಲೇಖವಿದೆ ಎಂದರು.

Tags :
ಮನುಷ್ಯರನ್ನು ಪ್ರೀತಿಸುವಂತಾಗಬೇಕು: . ಮುಖ್ಯಮಂತ್ರಿ ಸಿದ್ದರಾಮಯ್ಯಮನುಷ್ಯರು
Advertisement
Next Article