ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಧುಮೇಹಿಗಳೂ ಕೂಡ ಖುಷಿಯಿಂದ ತಿನ್ನಬಹುದು ರಾಗಿ ಬರ್ಫಿ

09:02 AM Jun 25, 2024 IST | Bcsuddi
Advertisement

ಸಿಹಿತಿನಿಸು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಶುಗರ್ ಬಂದರೆ ಸಿಹಿ ಮುಟ್ಟುವ ಹಾಗಿಲ್ಲ. ಆದರೆ ಸಿಹಿತಿನಿಸನ್ನು ನೋಡಿದರೆ ಬಾಯಲ್ಲಿ ನೀರು ಬರುತ್ತದೆ.

Advertisement

ಅಂತಹವರು ರಾಗಿಯಿಂದ ಮಾಡಿದ ಈ ಬರ್ಫಿಯನ್ನು ಖುಷಿಯಿಂದ ತಿನ್ನಬಹುದು. ಮಾಡುವ ವಿಧಾನವು ಸುಲಭವಿದೆ.

ಬೇಕಾಗುವ ಸಾಮಾಗ್ರಿ: 1 ಕಪ್ ರಾಗಿಹಿಟ್ಟು, 1 ಕಪ್ ಬೆಲ್ಲ, ½ ಕಪ್ ತುಪ್ಪ, ಸ್ವಲ್ಪ ಏಲಕ್ಕಿ ಪುಡಿ, ¼ ಕಪ್ ಹದ ಬಿಸಿ ಇರುವ ಹಾಲು, 1 ಚಮಚ ಮಿಕ್ಸ್ಡ್ ಡ್ರೈ ಫ್ರೂಟ್ಸ್(ಬೇಕಿದ್ದರೆ ಮಾತ್ರ).

ಮಾಡುವ ವಿಧಾನ: ಮೊದಲಿಗೆ ಒಂದು ಅಗಲವಾದ ಬಾಣಲೆಯನ್ನು ಗ್ಯಾಸ್ ಮೇಲೆ ಇಡಿ. ಅದಕ್ಕೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ. ಇದು ಬಿಸಿಯಾಗುತ್ತಲೆ ಸ್ವಲ್ಪ ಸ್ವಲ್ಪ ರಾಗಿ ಹಿಟ್ಟು ಹಾಕಿ ಚೆನ್ನಾಗಿ ಹುರಿಯಿರಿ. ಹಿಟ್ಟು ತಳ ಹತ್ತದಂತೆ ಕೈಯಾಡಿಸುತ್ತಾ ಇರಿ. ಹಿಟ್ಟು ಪರಿಮಳ ಬರುವವರಗೆ ಹುರಿಯಿರಿ. ನಂತರ ಇದನ್ನು ತಣ್ಣಗಾಗುವುದಕ್ಕೆ ಬಿಡಿ. ನಂತರ ಪುನಃ ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಬೆಲ್ಲದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣ ಸ್ವಲ್ಪ ಡ್ರೈ ಆದಾಗ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಇದಕ್ಕೆ ಏಲಕ್ಕಿ ಪೌಡರ್ ಹಾಕಿ. ಗ್ಯಾಸ್ ಆಫ್ ಮಾಡಿ. ಒಂದು ತಟ್ಟೆಗೆ ತುಪ್ಪ ಸವರಿ ಈ ಮಿಶ್ರಣವನ್ನು ತಟ್ಟೆಗೆ ಹಾಕಿ ಬರ್ಫಿ ಶೇಪ್ ನಲ್ಲಿ ಕತ್ತರಿಸಿ. ಬೇಕಿದ್ದರೆ ಡ್ರೈ ಪ್ರೂಟ್ಸ್ ಅನ್ನು ಮೇಲೆ ಹಾಕಿ.

Advertisement
Next Article