ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮದ್ರಸಾದ ಹೊಸ ಪಠ್ಯಕ್ರಮದಲ್ಲಿ ಶ್ರೀರಾಮನ ಅಧ್ಯಾಯ ಸೇರ್ಪಡೆ: ಉತ್ತರಾಖಂಡ ವಕ್ಫ್ ಅಧ್ಯಕ್ಷ

11:15 AM Jan 26, 2024 IST | Bcsuddi
Advertisement

ಡೆಹ್ರಡೂನ್: 'ಮದ್ರಸಾ ಆಧುನೀಕರಣ ಕಾರ್ಯಕ್ರಮ'ದ ಭಾಗವಾಗಿ ಉತ್ತರಾಖಂಡ ವಕ್ಫ್ ಮಂಡಳಿಗೆ ಸಂಯೋಜನೆಗೊಂಡಿರುವ ಮದರಸಾಗಳಲ್ಲಿ ಭಗವಾನ್ ರಾಮನ ಅಧ್ಯಾಯವನ್ನು ಹೊಸ ಪಠ್ಯಕ್ರಮದಲ್ಲಿ ಪರಿಚಯಿಸಲಾಗುವುದು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಜ. 25ರ ಗುರುವಾರ ತಿಳಿಸಿದ್ದಾರೆ.

Advertisement

ಮದರಸದ ವಿದ್ಯಾರ್ಥಿಗಳಿಗೆ ಪ್ರವಾದಿ ಮುಹಮ್ಮದ ಅವರೊಂದಿಗೆ ಶ್ರೀರಾಮನ ಜೀವನವನ್ನೂ ಕಲಿಸಲಾಗುವುದು. ವಕ್ಫ್ ಬೋರ್ಡ್ ಅಡಿಯಲ್ಲಿ ರಾಜ್ಯಾದ್ಯಂತ 117 ಮದರಸಾಗಳನ್ನು ನಡೆಸಲಾಗುತ್ತಿದೆ. 2024ರ ಮಾರ್ಚ್‌ನಿಂದ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಹೊಸ ಪಠ್ಯಕ್ರಮವನ್ನು ಡೆಹ್ರಾಡೂನ್, ಹರಿದ್ವಾರ, ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಗಳ ಮದರಸಾಗಳಲ್ಲಿ ಪರಿಚಯಿಸಲಾಗುವುದು. ತಂದೆಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಸಿಂಹಾಸನವನ್ನು ತ್ಯಜಿಸಿ ಕಾಡಿಗೆ ಹೋದವನು! ಶ್ರೀರಾಮನಂತಹ ಮಗನನ್ನು ಪಡೆಯಲು ಯಾರು ಬಯಸುವುದಿಲ್ಲ ಹೇಳಿ ?, ಶ್ರೀರಾಮನದು ಆದರ್ಶಪ್ರಾಯ ಜೀವನಎಂದು ಅವರು ಹೇಳಿದ್ದಾರೆ

ಭಗವಾನ್ ರಾಮನ ಮೌಲ್ಯಗಳನ್ನು ಅವರ ಧರ್ಮ ಅಥವಾ ನಂಬಿಕೆಯನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಅನುಸರಿಸಲು ಯೋಗ್ಯವಾಗಿದೆ ಎಂದು ಹೇಳಿದ್ದಾರೆ.

Advertisement
Next Article