For the best experience, open
https://m.bcsuddi.com
on your mobile browser.
Advertisement

ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ಅಬಕಾರಿ ಇಲಾಖೆ - ಮದ್ಯದ ದರದಲ್ಲಿ ಏರಿಕೆ‌

03:44 PM Jan 02, 2024 IST | Bcsuddi
ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ಅಬಕಾರಿ ಇಲಾಖೆ   ಮದ್ಯದ ದರದಲ್ಲಿ ಏರಿಕೆ‌
Advertisement

ಬೆಂಗಳೂರು: ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದ್ದು, ಸಾಮಾನ್ಯ ಜನರು ಕುಡಿಯುವ ಮದ್ಯದ ದರದಲ್ಲಿ ಏರಿಕೆ‌ಯಾಗಿದೆ.

ಈಗಾಗಲೇ 17% ರಷ್ಟು ಎಲ್ಲಾ ಮಧ್ಯದ ಮೇಲೆ ದರ ಏರಿಕೆ ಮಾಡಲಾಗಿದ್ದು, ಈಗ ಮತ್ತೊಮ್ಮೆ ಬಡವರು ಹೆಚ್ಚಾಗಿ ಕುಡಿಯುವ ಮೂರು ಹಾಟ್ ಫೇವರೆಟ್ ಬ್ರ್ಯಾಂಡ್​ಗಳ ದರ ಹೆಚ್ಚಳ ಮಾಡಲಾಗಿದೆ.

ಇನ್ನು ಮದ್ಯ ಉತ್ವಾದನ‌‌‌ ಕಂಪನಿಗಳು ಕ್ವಾಟರ್​ಗೆ 20 ರಿಂದ ಮೂವತ್ತು ರೂಪಾಯಿ ಏರಿಸಿದ್ದು, ಬಾರ್ ಮಾಲೀಕರಿಗೆ ಮತ್ತು ಅಬಕಾರಿ ಇಲಾಖೆಗೆ ಮದ್ಯ ತಯಾರಿಕ ಕಂಪನಿಗಳು ಈಗಾಗಲೇ ಸಂದೇಶ ಕಳುಹಿಸಿವೆ.

Advertisement

ಓಟಿ(180 ಎಂಎಲ್): ಈ ಹಿಂದೆ 90 ರೂಪಾಯಿ, ಜನವರಿ 2 ರಿಂದ 111 ರೂಪಾಯಿ.
ಬಿಪಿ(180 ಎಂಎಲ್): ಹಿಂದೆ 110 ರೂಪಾಯಿ, ಇಂದಿನಿಂದ- 145 ರೂಪಾಯಿ.
8ಪಿಎಂ(180 ಎಂಎಲ್): ನಿನ್ನೆಯ ದರ 90 ರೂಪಾಯಿ, ಇಂದಿನ ದರ 111 ರೂಪಾಯಿ ಆಗಿದೆ.

Author Image

Advertisement