ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮದ್ಯಪ್ರಿಯರಿಗೆ ಮತ್ತೆ ಶಾಕ್ ​: ಪ್ರತಿ ಬಿಯರ್​ ಬಾಟಲ್​ಗೆ 5 ರಿಂದ 20 ರೂ. ಹೆಚ್ಚಳ

01:26 PM Jul 30, 2024 IST | BC Suddi
Advertisement

ಬೆಂಗಳೂರು: ಸರ್ಕಾರ ಬದಲಾದರೂ ಜನರಿಗೆ ಮಾತ್ರ ಬೆಲೆ ಏರಿಕೆ ಬರೆ ನಿಲ್ಲುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಇಂಧನ ಮತ್ತು ಹಾಲಿನ ದರ ಹೆಚ್ಚಳವಾಗಿತ್ತು. ಇದೀಗ ಬಿಯರ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಲಾಗಿದೆ. ಪ್ರತಿ ಬಾಟಲ್​ಗೆ ಬರೋಬ್ಬರಿ 5 ರಿಂದ 20 ರೂಪಾಯಿವರೆಗೂ ಬೆಲೆ ಏರಿಕೆ ಮಾಡಲಾಗಿದೆ. ಕೆಲ ಮದ್ಯದ ಕಂಪನಿಗಳು ಕಳೆದ ಗುರುವಾರದಿಂದಲೇ ಬೆಲೆಗಳನ್ನು ಹೆಚ್ಚಿಸಿವೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ ಮತ್ತು ಬುಧವಾರದಿಂದ ಜಾರಿಗೆ ಬರಲಿದೆ. ಆಯಾ ಬ್ರ್ಯಾಂಡ್​ಗಳಿಗೆ ತಕ್ಕಂತೆ 5 ರಿಂದ 20 ರೂಪಾಯಿವರೆಗೂ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಅಂದಹಾಗೆ ರಾಜ್ಯ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ರಾಜ್ಯ ಸರ್ಕಾರ, ಅದಕ್ಕೆ ಹಣ ಹೊಂದಿಸುವ ಸಲುವಾಗಿ ಬಿಯರ್​ ಮೇಲೆ ಶೇ. 20 ರಷ್ಟು ಸುಂಕವನ್ನು ವಿಧಿಸಿತ್ತು. ಆ ಬಳಿಕ ಅದರ ವೆಚ್ಚವನ್ನು ಸರಿದೂಗಿಸಲು ಮದ್ಯದ ಕಂಪನಿಗಳು ಪ್ರತಿ ಬಾಟಲ್​ ಮೇಲೆ 10 ರೂಪಾಯಿ ಬೆಲೆ ಏರಿಕೆ ಮಾಡಿದ್ದವು. ಇದೀಗ ಸರ್ಕಾರ ಮತ್ತೊಮ್ಮೆ ತೆರಿಗೆ ಹೆಚ್ಚಳ ಮಾಡಿದ್ದು, ಮದ್ಯ ಕಂಪನಿಗಳು ಮತ್ತೆ ದರ ಏರಿಕೆ ಮಾಡಿವೆ. ಕಳೆದ 17 ತಿಂಗಳಲ್ಲಿ ಬರೋಬ್ಬರಿ 5ನೇ ಬಾರಿ ಬೆಲೆ ಏರಿಕೆಯಾಗಿದೆ.

Advertisement

Advertisement
Next Article